ಮಂಗಳೂರು : ಚೆಕ್ ಬೌನ್ಸ್ ಪ್ರಕರಣದ ಆರೋಪಿ ಚಂದಶೇಖರ್ ಗೆ ಸಜೆ, ದಂಡ.

Prakhara News
1 Min Read
Judge and gavel in courtroom

ಮಂಗಳೂರು ; ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973 ರ ಸೆಕ್ಷನ್ 255(2) ರ ಅಡಿಯಲ್ಲಿ ಪ್ರವೀಣ್ ಪೂಜಾರಿ ಅವರು ಚೆಕ್ ಬೌನ್ಸ್ ಪ್ರಕಾರಣಕ್ಕೆ ದಾಖಲಿಸಿದ ದೂರಿನಂತೆ ವಿಚಾರಣೆ ನಡೆಸಿದ ಮಂಗಳೂರು ಜೆ ಎಂ ಎಫ್ ಸಿ ನ್ಯಾಯಾಲಯ ಆರೋಪಿ ಚಂದರಶೇಖರ್ ತಪ್ಪಿತಸ್ಥನೆಂದು ಘೋಷಿಸಿದ ಸಜೆ ವಿಧಿಸಿದೆ.

ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್, 1881 ರ ಸೆಕ್ಷನ್ 138 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕೆ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಪರಿಣಾಮವಾಗಿ ಆರೋಪಿಗೆ ರೂ.7,25,000/- ದಂಡ ವಿಧಿಸಲಾಗಿದೆ. ತಪ್ಪಿದಲ್ಲಿ, ಅವರು 5 ತಿಂಗಳ ಅವಧಿಗೆ ಸರಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಮತ್ತು ರೂ.7,25,000/- ದಂಡದ ಮೊತ್ತವನ್ನು ವಸೂಲಿ ಮಾಡಿದ ನಂತರ, ರೂ.7,20,000/- ಮೊತ್ತವನ್ನು ದೂರುದಾರರಿಗೆ CrPC ಯ ಸೆಕ್ಷನ್.357 ರ ಅಡಿಯಲ್ಲಿ ಪರಿಹಾರವಾಗಿ ಪಾವತಿಸಬೇಕು. ಮತ್ತು ಉಳಿದ ರೂ.5,000/- ಎ ಮೊತ್ತವನ್ನು ರಾಜ್ಯದ ವೆಚ್ಚವಾಗಿ ಭರಿಸಬೇಕು. ತಪ್ಪಿದಲ್ಲಿ ಆರೋಪಿಯ ಜಾಮೀನು ಬಾಂಡ್ ಮತ್ತು ಶ್ಯೂರಿಟಿ ಬಾಂಡ್ ರದ್ದಾಗುತ್ತದೆ.

ಕಕ್ಷದಾರ ಪ್ರವೀಣ್ ಪೂಜಾರಿ ಪರವಾಗಿ ನ್ಯಾಯಾಲಯದಲ್ಲಿ ನ್ಯಾಯವಾದಿ ರಾಘವೇಂದ್ರ ರಾವ್, ವರ್ಟಿ ಸ್ ಲೇಜಿಸ್, ಗೌರಿ ಶೆಣೈ, ರೋಯಿಸ್ತನ್, ಆನಗ ವಾದಿಸಿದ್ದರು.

Share This Article
Leave a Comment