ಮಂಗಳೂರು: ಕರಾವಳಿಯ ಹೆಮ್ಮೆಯ ಹಾಗೂ ಅತ್ಯಂತ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ಲ್ಯಾಂಡ್ ಲಿಂಕ್ಸ್, ಕರಾವಳಿ ಭಾಗದಲ್ಲಿ ಕಳೆದ 45 ವರ್ಷಗಳಿಂದ ತನ್ನ ಪ್ರಾಮಾಣಿಕ ಮತ್ತು ಯಶಸ್ವಿ ಉದ್ಯಮದ ಮೂಲಕ ಲಕ್ಷಾಂತರ ಜನರ ನಂಬಿಕೆಯನ್ನು ಗಳಿಸಿದೆ. ಈ ಸುದೀರ್ಘ ಯಶಸ್ವಿ ಹಾದಿಯ ಸವಿನೆನಪಿಗಾಗಿ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ಪ್ರಪ ್ರಥಮ ಬಾರಿಗೆ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ, ನಾಡಿನ ಜನತೆಗೆ ಯೋಗ್ಯವಾದ ನಾಲ್ಕು ಭವ್ಯ ಸಭಾಭವನಗಳನ್ನು ಏಕಕಾಲದಲ್ಲಿ ಲೋಕಾರ್ಪಣೆ ಮಾಡುತ್ತಿದೆ.


ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಂಧ್ರ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಸನ್ಮಾನ್ಯ ಜ| ಎಸ್. ಅಬ್ದುಲ್ ನಜೀರ್ ಅವರು ಆಗಮಿಸಿ, ನಾಲ್ಕೂ ಸಭಾಂಗಣಗಳನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ. ಅತ್ಯಾಧುನಿಕ ಸೌಲಭ್ಯಗಳು, ಐಷಾರಾಮಿ ವಿನ್ಯಾಸ ಹಾಗೂ ಪ್ರಕೃತಿಯ ಸೊಬಗನ್ನು ಮೈಗೂಡಿಸಿಕೊಂಡಿರುವ ಈ ನಾಲ್ಕು ಅದ್ದೂರಿ ಪಾಲೆಮಾರ್ ಸಭಾಂಗಣಗಳ ಮಹಾ ಲೋಕಾರ್ಪಣಾ ಸಮಾರಂಭವು ಮೇ 23, 2026 ರ ಶನಿವಾರದಂದು ಅತ್ಯಂತ ವೈಭವದಿಂದ ಜರುಗಲಿದೆ. ಅಂದು ಬೆಳಿಗ್ಗೆ 10:೦೦ ಗಂಟೆಗೆ ಮಂಗಳೂರಿನ ಮೇರಿಹಿಲ್ನಲ್ಲಿರುವ ಪಾಲೆಮಾರ್ ಕನ್ವೆನ್ಶನ್ ಸೆಂಟರ್ನಲ್ಲಿ ಲೋಕಾರ್ಪಣಾ ಕಾರ್ಯಕ ್ರಮ ನಡೆಯಲಿದೆ.

ಸಮಾರಂಭದಲ್ಲಿ ಭಾರತ ಸರ್ಕಾರದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ಯು. ಟಿ. ಖಾದರ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್, ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಐವನ್ ಡಿಸೋಜ ಸೇರಿದಂತೆ ಕರಾವಳಿ ಮತ್ತು ರಾಜ್ಯ ಮಟ್ಟದ ಹಲವಾರು ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರು ಹಾಗೂ ಉದ್ಯಮಿಗಳು ಭಾಗವಹಿಸಲಿದ್ದಾರೆ.


ಸಮಾಜಕ್ಕೆ ವಾಪಸ್ ನೀಡುವ ಉದಾತ್ತ ಧ್ಯೇಯ
ಈ ಮಹತ್ವಾಕಾಂಕ್ಷಿ ಯೋಜನೆಯು ಲ್ಯಾಂಡ್ ಲಿಂಕ್ಸ್ ಗ್ರೂಪ್ನ ಅಧ್ಯಕ್ಷರು ಮತ್ತು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರ ಕನಸಿನ ಕೂಸಾಗಿದೆ. ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಒತ್ತು ನೀಡುವುದು ಮತ್ತು ಇಲ್ಲಿನ ಜನರಿಗೆ ಸುಲಭವಾಗಿ ಕೈಗೆಟುಕುವ ದರದಲ್ಲಿ ಅತ್ಯುನ್ನತ ಸೌಲಭ್ಯಗಳ ಸಭಾಂಗಣಗಳನ್ನು ಒದಗಿಸುವುದು ಅವರ ಮೂಲ ಉದ್ದೇಶವಾಗಿದೆ. ಈ ಸಭಾಭವನಗಳು ವಿವಾಹ ಕಾರ್ಯಕ್ರಮಗಳು, ಸಾಮೂಹಿಕ ವಿವಾಹಗಳು, ಧಾರ್ಮಿಕಸಾಂಸ್ಕೃತಿಕ ಕಾರ್ಯಕ್ರಮಗಳು, ಉದ್ಯೋಗ ಮೇಳಗಳು, ವಸ್ತು ಪ್ರದರ್ಶನಗಳು, ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಮಹಿಳಾ ಸಬಲೀಕರಣದಂತಹ ಸಮಾಜಮುಖಿ ಚಟುವಟಿಕೆಗಳಿಗೆ ಮುಕ್ತವಾಗಿರಲಿವೆ.
ಈ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಕೃಷ್ಣ ಜೆ. ಪಾಲೆಮಾರ್ ಅವರು “ಈ ನಾಲ್ಕು ಸಭಾಭವನಗಳನ್ನು ನಾನು ಕೇವಲ ಒಬ್ಬ ಉದ್ಯಮಿಯ ಲಾಭದ ದೃಷ್ಟಿಯಿಂದ ನಿರ್ಮಿಸಿದ್ದಲ್ಲ. ಕರಾವಳಿಯ ಜನತೆ ಕಳೆದ 45 ವರ್ಷಗಳಿಂದ ನಮಗೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಪ್ರತಿಯಾಗಿ, ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕು ಎಂಬ ಸದುದ್ದೇಶದಿಂದ ಇವುಗಳನ್ನು ರೂಪಿಸಿದ್ದೇನೆ. ಬಡ ಕುಟುಂಬಗಳ ಸಾಮೂಹಿಕ ವಿವಾಹದಂತಹ ಸಂದರ್ಭದಲ್ಲಿ ಹೆತ್ತವರ ಕಣ್ಣಲ್ಲಿ ಕಾಣುವ ಸಾರ್ಥಕತೆ ಮತ್ತು ನೆಮ್ಮದಿಯ ಭಾವವೇ ನನಗೆ ನಿಜವಾದ ಸಂಪತ್ತು. ನಮ್ಮ ಈ ಸಂಸ್ಥೆ ಸದಾ ಸಾರ್ವಜನಿಕರ ಹಿತವನ್ನು ಬಯಸುತ್ತದೆ” ಎಂದು ತಿಳಿಸಿದ್ದಾರೆ.

ಸಾಮಾಜಿಕ ಬದ್ಧತೆ ಮತ್ತು ಉಚಿತ ಸೇವೆ
ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಸದಾ ಸಾಮಾಜಿಕ ಕಳಕಳಿಗೆ ಹೆಸರುವಾಸಿಯಾಗಿದೆ. ಜಾತಿ, ಧರ್ಮ, ಬಡವ-ಬಲ್ಲಿದ ಎಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದು ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ಈ ಸಾಮಾಜಿಕ ಬದ್ಧತೆಯ ಭಾಗವಾಗಿ, ಸಮಾಜದ ಒಳಿತಿಗಾಗಿ ಆಯೋಜಿಸುವ ಸಾಮೂಹಿಕ ವಿವಾಹಗಳು ಹಾಗೂ ಸದುದ್ದೇಶದ ಉದಾತ್ತ ಸಾರ್ವಜನಿಕ ಕಾರ್ಯಕ್ರಮಗಳಿಗೆ ಈ ಎಲ್ಲಾ ಸಭಾಂಗಣಗಳನ್ನು ನಿಯಮಾನುಸಾರವಾಗಿ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.
1. ಪಾಲೆಮಾರ್ ಕನ್ವೆನ್ಶನ್ ಸೆಂಟರ್, ಮೇರಿಹಿಲ್, ಮಂಗಳೂರು ಅದ್ದೂರಿತನ ಮತ್ತು ಸಾಂಪ್ರದಾಯಿಕತೆಯ ಅದ್ಭುತ ಸಮ್ಮಿಲನವೇ ಮೇರಿಹಿಲ್ನಲ್ಲಿರುವ ಪಾಲೆಮಾರ್ ಕನ್ವೆನ್ಶನ್ ಸೆಂಟರ್. ನೋಡುಗರ ಕಣ್ಣು ಸೆಳೆಯುವ ಮರದ ಕರಕುಶಲತೆಯಿಂದ ಕೂಡಿದ ಭವ್ಯ ಒಳಾಂಗಣ ವಿನ್ಯಾಸ ಇದರ ಪ್ರಮುಖ ಆಕರ್ಷಣೆಯಾಗಿದೆ. ಸಾಂಪ್ರದಾಯಿಕ ಮದುವೆ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತವಾಗಿದೆ. ಸಮಾರಂಭಗಳ ಜೊತೆಗೆ ಕಾರ್ಪೊರೇಟ್ ಶೈಲಿಯ ಹೈ-ಟೆಕ್
ವಿಶೇಷತೆಗಳು: ಅತ್ಯಾಧುನಿಕ ತಂತ್ರಜ್ಞಾನದ ಒಳಾಂಗಣ ಸಭಾಂಗಣ, ಸುಸಜ್ಜಿತ ಹಾಗೂ ವಿಶಾಲವಾದ ಅತಿಥಿ ಕೊಠಡಿಗಳು, ಪ್ರತ್ಯೇಕ ಪ್ರಾರ್ಥನಾ ಮಂದಿರ ಹಾಗೂ ಅತ್ಯಂತ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ. ಶೀಘ್ರದಲ್ಲಿಯೇ ಅನಾವರಣ: ಅದ್ಭುತ ಒಳಾಂಗಣ ಸಭಾಂಗಣ ಇರುವ ಈ ಸ್ಥಳದಲ್ಲಿ ಶೀಘ್ರದಲ್ಲಿಯೇ ಗ್ರೀನ್ ವ್ಯಾಲಿ ಎಂಬ ವಿನೂತನ ತೆರೆದ ಸಭಾಂಗಣವೂ ಸಿದ್ಧವಾಗಲಿದೆ. ಅತ್ಯಂತ ವಿಶಾಲವಾದ ಸ್ಥಳಾವಕಾಶ ಇರುವ ಈ ತೆರೆದ ಸಭಾಂಗಣ ಸರ್ವರೀತಿಯ ಹೊರಾಂಗಣ ಕಾರ್ಯಕ್ರಮಗಳಿಗೂ ಸೂಕ್ತವಾಗುವಂತೆ ಮೂಡಿಬರಲಿದೆ.
2. ಪಾಲೆಮಾರ್ ಗಾರ್ಡನ್, ಮೋರ್ಗನ್ಸ್ ಗೇಟ್, ಮಂಗಳೂರು ಮಂಗಳೂರು ನಗರದ ಹೃದಯಭಾಗದಲ್ಲಿರುವ ಮೋರ್ಗನ್ಸ್ ಗೇಟ್ನಲ್ಲಿ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವಂತೆ ಈ ಭವ್ಯ ಗಾರ್ಡನ್ ನಿರ್ಮಿಸಲಾಗಿದೆ. ಪ್ರಶಾಂತವಾದ ಹಸಿರು ಪರಿಸರದಲ್ಲಿ, ಐಷಾರಾಮಿತನದ ಜೊತೆಗೆ ನಿಸರ್ಗದ ಸೌಂದರ್ಯವನ್ನು ಸವಿಯಲು ಇಚ್ಛಿಸುವವರಿಗೆ ಇದು ಸ್ವರ್ಗದಂತಿದೆ. ಇದರ ಅತ್ಯಾಕರ್ಷಕ ವಿನ್ಯಾಸವು ಯಾವುದೇ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು, ಬದುಕಿನ ಸುಂದರ ಕ್ಷಣಗಳನ್ನು ಅವಿಸ್ಮರಣೀಯಗೊಳಿಸಲು ಅನುವು ಮಾಡಿಕೊಡುತ್ತದೆ.
ವಿಶೇಷತೆಗಳು: ವೈಭವದ ಒಳಾಂಗಣ ಸಭಾಂಗಣ, ತೆರೆದ ಸಭಾಂಗಣ, ಸಾಂಪ್ರದಾಯಿಕ ಕಾಟೇಜ್ಗಳು ಮತ್ತು ವಿಶಾಲವಾದ ರೂಮ್ಗಳು, ಸುಂದರವಾದ ಹೊರಾಂಗಣ ಈಜುಕೊಳ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮತ್ತು ಬೃಹತ್ ಹಸಿರು ಮೈದಾನ
3. ಪಾಲೆಮಾರ್ ಫಾರ್ಮ್ಸ್, ಸುರತ್ಕಲ್, ಮಂಗಳೂರು ನಗರ ಪ್ರದೇಶದ ವಾತಾವರಣದಿಂದ ದೂರವಿದ್ದು, ನಿಸರ್ಗದ ಮೌನ, ತಂಪಾದ ಗಾಳಿ, ಮರಗಳ ನೆರಳು ಹಾಗೂ ಪಕ್ಷಿಗಳ ಕಲರವದ ನಡುವೆ ಹಸಿರನ್ನು ಪ್ರೀತಿಸುವವರಿಗಾಗಿ ಸುರತ್ಕಲ್ ಸಮೀಪ 20 ಎಕರೆ ವಿಶಾಲವಾದ ಜಾಗದಲ್ಲಿ ಈ ಫಾರ್ಮ್ಸ್ ಸಿದ್ಧಗೊಂಡಿದೆ. ಆಪ್ತ ಒಡನಾಡಿಗಳೊಂದಿಗೆ ಆಚರಿಸುವ ಮದುವೆ, ಹೊರಾಂಗಣ ಕಾರ್ಯಕ್ರಮಗಳು, ಬರ್ತ್ಡೇ ಪಾರ್ಟಿಗಳು, ಮೆಹೆಂದಿ ಹಾಗೂ ಕೌಟುಂಬಿಕ ಸಮಾರಂಭಗಳಿಗೆ ಇದು ಸೂಕ್ತ ತಾಣ.
ವಿಶೇಷತೆಗಳು: ವಿಶಾಲವಾದ ತೆರೆದ ಸಭಾಂಗಣ, ಈಜುಕೊಳ, ಮಕ್ಕಳು ಆನಂದಿಸಲು ಸುಸಜ್ಜಿತ ಮಕ್ಕಳ ಆಟದ ಪ್ರದೇಶ ಮತ್ತು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ.
4. ನೇತ್ರಾವತಿ ಸಭಾಭವನ, ಕಡೆಕಾರ್, ಜೆಪ್ಪಿನಮೊಗರು, ಮಂಗಳೂರು ಮಂಗಳೂರಿನ ಜೀವನಾಡಿ ನೇತ್ರಾವತಿ ನದಿಯ ದಡದಲ್ಲಿರುವ ಜೆಪ್ಪಿನಮೊಗರಿನ ಕಡೆಕಾರ್ ಎಂಬ ಅತ್ಯಂತ ಪ್ರಶಾಂತ ಮತ್ತು ಪವಿತ್ರ ವಾತಾವರಣದಲ್ಲಿ ಈ ಸಭಾಂಗಣ ತಲೆಯೆತ್ತಿದೆ. ಒಂದು ಬದಿಯಲ್ಲಿ ನದಿಯ ತಣ್ಣನೆ ಗಾಳಿ, ಇನ್ನೊಂದು ಬದಿಯಲ್ಲಿ ಪುರಾತನ ದೇವಸ್ಥಾನವಿದ್ದು, ಇಡೀ ಪರಿಸರಕ್ಕೆ ದೈವಿಕ ಕಳೆಯನ್ನು ನೀಡುತ್ತದೆ. ವಿವಾಹ ಕಾರ್ಯಕ ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಸಂಗೀತ ಕಛೇರಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇದು ಅತ್ಯಂತ ಪ್ರಶಸ್ತವಾಗಿದೆ. ಕಡಿಮೆ ದರದಲ್ಲಿ ಜನಸಾಮಾನ್ಯರಿಗೂ ಅನುಕೂಲವಾಗುವಂತೆ ಇದನ್ನು ನಿರ್ಮಿಸಲಾಗಿದೆ.
ವಿಶೇಷತೆಗಳು: ವಿಶಾಲ ಒಳಾಂಗಣ ಸಭಾಂಗಣ, ಅಚ್ಚುಕಟ್ಟಾದ ಊಟದ ಹಾಲ್ ಮತ್ತು ಅಡುಗೆ ಮನೆ. (ಗಮನಿಸಿ: ಇಲ್ಲಿ ಕೇವಲ ಶುದ್ಧ ಸಸ್ಯಾಹಾರಿ ಆಹಾರ ತಯಾರಿಕೆಗೆ ಮಾತ್ರ ಅವಕಾಶವಿದ್ದು, ಸಾತ್ವಿಕ ವಾತಾವರಣ ಬಯಸುವವರ ನೆಚ್ಚಿನ ತಾಣವಾಗಲಿದೆ).
ಬಡವ-ಬಲ್ಲಿದನೆಂಬ ಭೇದವಿಲ್ಲ, ಎಲ್ಲರಿಗೂ ಕೈಗೆಟಕುವ ದರದಲ್ಲಿ ಲಭ್ಯ
ಕಾರ್ಪೊರೇಟ್ ಶೈಲಿಯ ಅದ್ದೂರಿ ಇವೆಂಟ್ ಗಳಿಂದ ಹಿಡಿದು ಜನಸಾಮಾನ್ಯರ ಸಣ್ಣ ಬಜೆಟ್ನ ಕಾರ್ಯಕ್ರಮಗಳವರೆಗೆ, ಪ್ರತಿಯೊಬ್ಬರ ಆರ್ಥಿಕ ಶಕ್ತಿಗೆ ತಕ್ಕಂತೆ ಇಲ್ಲಿ ಸಭಾಂಗಣಗಳು ಲಭ್ಯವಿವೆ. ಬಡವ-ಬಲ್ಲಿದನೆಂಬ ಭೇದವಿಲ್ಲದೆ ಎಲ್ಲಾ ವರ್ಗದ ಜನರಿಗೂ ಒಪ್ಪುವ ಮತ್ತು ಸಲ್ಲುವ ಸುಂದರ ತಾಣಗಳಿವು. ಇಂದಿನ ದಿನಗಳಲ್ಲಿ ಮದುವೆಗಳು ಸಾಮಾನ್ಯ ಕುಟುಂಬಗಳಿಗೆ ಆರ್ಥಿಕ ಹೊರೆಯಾಗುತ್ತಿದ್ದು, ಅದಕ್ಕೆ ಪರ್ಯಾಯವಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ, ಗೌರವಯುತ ಹಾಗೂ ಎಲ್ಲ ವರ್ಗದ ಜನರಿಗೂ ಕೈಗೆಟಕುವ ದರದ ಸಭಾಂಗಣಗಳನ್ನು ಇಲ್ಲಿ ರೂಪಿಸಲಾಗಿದೆ.


