ಎಂಸಿಎಫ್ ಹೆಸರನ್ನು ಪಾರಾದೀಪ್ ಫಾಸ್ಟೇಟ್ಸ್ ಲಿಮಿಟಿಡ್ ನಾಮಫಲಕಕ್ಕೆ ಸೇರಿಸಲಾಗಿದ್ದು ಹೋರಾಟಕ್ಕೆ ಸಿಕ್ಕ ಜಯ : ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜ

Prakhara News
1 Min Read

ಮಂಗಳೂರು : ಮಂಗಳೂರಿನ ಹೆಮ್ಮೆಯ ಗುರುತಾದ ಎಂಸಿಎಫ್ ಹೆಸರನ್ನು ತೆಗೆದು ಪಾರಾದೀಪ್ ಫಾಸ್ಟೇಟ್ಸ್ ಲಿಮಿಟಿಡ್ ಎಂದು ನಾಮಫಲಕವನ್ನು ಈ ಹಿಂದೆ ಹಾಕಲಾಗಿತ್ತು. ಈ ಬಗ್ಗೆ ವಿರೋಧಿಸಿದ ಮೇಲೆ ಮತ್ತೊಮ್ಮೆ ಎಂಸಿಎಫ್ ಹೆಸರನ್ನು ನಾಮಫಲಕಕ್ಕೆ ಸೇರ್ಪಡೆ ಮಾಡಲಾಯಿತು ಇದು ಹೋರಾಟಕ್ಕೆ ಸಿಕ್ಕ ಫಲವಾಗಿದೆ ಎಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜ ತಿಳಿಸಿದರು.

ಅವರು ಮನಪಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಂಸಿಎಫ್ ಹೆಸರನ್ನು ಕೂಡಲೇ ನಾಮಫಲಕ್ಕೆ ಮರುಸ್ಥಾಪಿಸುವಂತೆ ಪಾರಾದೀಪ್ ಫಾಸ್ಟೇಟ್ಸ್ ಲಿಮಿಟಿಡ್ ಆಡಳಿತ ಮಂಡಳಿಗೆ ಆಗ್ರಹಿಸಲಾಗಿತ್ತು ತಪ್ಪಿದಲ್ಲಿ ಉಗ್ರ ಹೋರಾಟ ಆರಂಭಿಸಿ ವಿಧಾನ ಮಂಡಲದಲ್ಲಿಯೂ ವಿಷಯವನ್ನು ಪ್ರಸ್ತಾಪಿಸುತ್ತೇನೆ ಎಂದು ಎಚ್ಚರಿಕ್ಕೆಯನ್ನು ನೀಡಿದೆ . ಅಷ್ಟಲ್ಲದೆ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದು ನೇರವಾಗಿ ಸಂಸ್ಥೆಯ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಚರ್ಚೆಯನ್ನು ಮಾಡಲಾಗಿತ್ತು.ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಆಡಳಿತ ಮಂಡಳಿ ಎಚ್ಚೆತ್ತು ಎಂಸಿಎಫ್ ಹೆಸರನ್ನು ಮರುಸ್ಥಾಪಿಸಲು ತಾತ್ವಿಕ ಸಮ್ಮತಿ ನೀಡಿತು . ಇದೀಗ ನಾಮಫಲಕ ಮರುಸ್ಥಾಪನೆಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸತೀಶ್ , ಶಶಿಧರ್ ಹೆಗ್ಡೆ, ಸುರೇಶ್ ಪಿಕೆ ,ಹರೀಶ್ ,ಎಂಸಿಎಫ್ ಮಾಜಿ ಉದ್ಯೋಗಿಗಳು ಸಹಿತ ಮತ್ತಿತ್ತರರು ಉಪಸ್ಥಿತರಿದ್ದರು .

Share This Article
Leave a Comment