ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನಾಸೀರ್ ಹುಸೇನ್ ಹೃದಯಾಘಾತದಿಂದ ನಿಧನ

Prakhara News
1 Min Read

ಉಡುಪಿ : ಕಂಡ್ಲೂರಿನ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಬ್ ಇನ್ಸ್‌ಪೆಕ್ಟರ್ ನಾಸೀರ್ ಹುಸೇನ್ ಅವರು ಹೃದಯಾಘಾತದಿಂದ  ನಿಧನರಾಗಿದ್ದಾರೆ, ಅವರಿಗೆ 58 ವರ್ಷ ವಯಸ್ಸಾಗಿತ್ತು.


ರವಿವಾರ ಬೆಳಿಗ್ಗೆ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಡೆಯುತ್ತಿದ್ದ ನಮ್ಮ ಪೋಲಿಸ್ ನಮ್ಮ ಹೆಮ್ಮೆ ಹಾಗೂ ‘ಡ್ರಗ್ ಫ್ರೀ ಅಭಿಯಾನ ಕರ್ನಾಟಕ ‘ 5 ಕಿ.ಮೀ ದೂರದ ಮ್ಯಾರಥಾನ್ ಓಟದಲ್ಲಿ ಅವರು ಉತ್ಸಾಹದಿಂದ ಭಾಗವಹಿಸಿದ್ದರು, ಓಟದ ಮಧ್ಯೆ ಹಠಾತ್ ಎದೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿದ್ದು ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು, ಕೂಡಲೇ ಅವರನ್ನು ಉಡುಪಿಯ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಗಿದ್ದರೂ ಮಾರ್ಗ ಮಧ್ಯದಲ್ಲೇ ಅವರು ಇಹಲೋಕ ತ್ಯಜಿಸಿದರು.

ಮ್ರತ ನಾಸಿರ್ ಹುಸೇನ್ ಅವರು ಉಡುಪಿ ಜಿಲ್ಲೆಯ ಶಂಕರನಾರಾಯಣ, ಅಮಾಸೆಬೈಲು, ಕುಂದಾಪುರ, ಕಾರ್ಕಳ ಗ್ರಾಮಾಂತರ ಸೇರಿದಂತೆ  ಚಿಕ್ಕಮಗಳೂರಿನ ವಿವಿಧ ಪೋಲಿಸ್ ಠಾಣೆಗಳಲ್ಲಿ ಪಿಎಸ್ಐಯಾಗಿ ಸೇವೆಸಲ್ಲಿಸಿದ್ದರು

Share This Article
Leave a Comment