ಕರಾವಳಿಯಲ್ಲಿ ನಡೆಯುವ ಪ್ರತಿ ಕಂಬಳಕ್ಕೂ ರಾಜ್ಯ ಸರಕಾರದಿಂದ 25 ಲಕ್ಷ ರೂ.ಹಾಗೂ ಸ್ಥಳೀಯ ಆಡಳಿತದಿಂದ 25 ಲಕ್ಷ ರೂ. ಸೇರಿದಂತೆ ಒಟ್ಟು 50 ಲಕ್ಷ ರೂ ಸಿಗುವಂತಾಗಬೇಕು : ಸದಾನಂದ ಗೌಡ

Prakhara News
1 Min Read

ಮಂಗಳೂರು : ಕರಾವಳಿಯಲ್ಲಿ ನಡೆಯುವ ಪ್ರತಿ ಕಂಬಳಕ್ಕೂ ರಾಜ್ಯ ಸರಕಾರದಿಂದ 25 ಲಕ್ಷ ರೂ.ಹಾಗೂ ಸ್ಥಳೀಯ ಆಡಳಿತದಿಂದ 25 ಲಕ್ಷ ರೂ. ಸೇರಿದಂತೆ ಒಟ್ಟು 50 ಲಕ್ಷ ರೂ ಸಿಗುವಂತಾಗಬೇಕು. ಇದಕ್ಕೆ ಒತ್ತಾಯಿಸಿ ಸರಕಾರಕ್ಕೆ ಪತ್ರ ಬರೆಯುವೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಹೇಳಿದರು. ಕೀರ್ತಿಶೇಷ ಜೆ. ಜಯ ಗಂಗಾಧರ ಶೆಟ್ಟಿ ಮನ್ನುತೋಟ ಗುತ್ತು ಮತ್ತು ನಾಡಾಜೆಗುತ್ತು ಅವರ ಸ್ಮರಣಾರ್ಥ 16ನೇ ವರ್ಷದ ಜಪ್ಪಿನಮೊಗರು ಹೊನಲು ಬೆಳಕಿನ “ಜಯ-ವಿಜಯ ಜೋಡುಕರೆ ಕಂಬಳ’ ದಲ್ಲಿ ಅವರು ಮಾತನಾಡಿ, ಸಹಸ್ರಾರು ಮಂದಿ ಭಾಗಿಯಾಗುವ ಈ ಜಾನಪದ ಕ್ರೀಡೆಯನ್ನು ಸಂಘಟಿಸುವುದು ಸುಲಭವಲ್ಲ ಎಂದರು.

ಎಂಆರ್‌ಜಿ ಗ್ರೂಪ್‌ ಚೇರ್ಮನ್ ಡಾ| ಕೆ. ಪ್ರಕಾಶ್‌ ಶೆಟ್ಟಿ ಅವರು ಮಾತನಾಡಿ, ಕಂಬಳ ಎನ್ನುವುದು ಹಿರಿಯರು ನಮಗೆ ಕೊಟ್ಟು ಹೋದ ಜಾನಪದ ಕ್ರೀಡೆ, ಈಗ ಅದನ್ನು ಉದ್ಯಮಿಗಳು, ರಾಜಕಾರಣಿಗಳು ಮುಂದುವರಿಸಿಕೊಂಡು ಹೋಗುತ್ತಿರುವುದು ಸ್ವಾಗತಾರ್ಹ ಎಂದರು.

ಅದಾನಿ ದಕ್ಷಿಣ ಭಾರತ ಗ್ರೂಪ್ ಇದರ ಅಧ್ಯಕ್ಷ ಕಿಶೋರ್‌ಆಳ್ವ, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾ‌ರ್ ಶುಭ ಹಾರೈಸಿದರು. ಕಂಬಳ ಸಮಿತಿ ಅಧ್ಯಕ್ಷ ಜೆ.ಅನಿಲ್ ಶೆಟ್ಟಿ ಮನ್ನುತೋಟಗುತ್ತು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಶಾಸಕ ಯಶಪಾಲ್ ಸುವರ್ಣ, ಸತೀಶ್ ಕುಂಪಲ, ಮಾಜಿ ಕಾರ್ಪೊರೇಟರ್‌ಜೆ. ನಾಗೇಂದ್ರ ಕುಮಾರ್‌ಮುಂತಾದವರಿದ್ದರು. ಕಂಬಳ ಸಮಿತಿ ಗೌರವಾಧ್ಯಕ್ಷ ವೇದವ್ಯಾಸ ಕಾಮತ್ ಸ್ವಾಗತಿಸಿದರು.

Share This Article
Leave a Comment