ಒಂದು ಡಾಲರ್ ಗೆ 95 ರೂಪಾಯಿ – ಇತರ ದೇಶಗಳಿಗಿಂತ ನಮ್ಮ ಸ್ಥಿತಿ ಉತ್ತಮ: ನಿರ್ಮಲಾ ಸೀತಾರಾಮನ್

Prakhara News
1 Min Read
New Delhi: Union Finance Minister Nirmala Sitharam speaks in the Lok Sabha during the second part of the Budget Session of Parliament in New Delhi on Monday, March 30, 2026. (Photo: IANS/Video Grab/Sansad TV)

ನವದೆಹಲಿ : ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿಯುತ್ತಿದ್ದರೂ, ಇತರ ಉದಯೋನ್ಮುಖ ಮಾರುಕಟ್ಟೆಗಳಿಗೆ ಹೋಲಿಸಿದರೆ ರೂಪಾಯಿ “ಸಂಪೂರ್ಣವಾಗಿ ಉತ್ತಮವಾಗಿದೆ” ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ.

ರೂಪಾಯಿ ಅಪಮೌಲ್ಯೀಕರಣದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಭಾರತದ ಆರ್ಥಿಕ ಮೂಲಭೂತ ಅಂಶಗಳು ಮತ್ತು ವಿದೇಶೀ ವಿನಿಮಯ ಮೀಸಲು ಬಲಿಷ್ಠವಾಗಿವೆ. ನಮ್ಮ ಹಣಕಾಸು ಕೊರತೆ ನಿರ್ವಹಣೆಯನ್ನು ಇಡೀ ಜಗತ್ತು ಶ್ಲಾಘಿಸುತ್ತಿದೆ” ಎಂದರು. ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಏಷ್ಯಾದ ಬಹುತೇಕ ಕರೆನ್ಸಿಗಳು ಕುಸಿದಿದ್ದು, ಇದು ಕೇವಲ ರೂಪಾಯಿಗೆ ಸೀಮಿತವಾದ ಸಮಸ್ಯೆಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ದಕ್ಷಿಣ ಕೊರಿಯಾದ ವೊನ್ (ಶೇ 4.6), ಥಾಯ್ ಬಹ್ತ್ (ಶೇ 5.5) ಮತ್ತು ಫಿಲಿಪೈನ್ ಪೆಸೊ (ಶೇ 4.8) ರೂಪಾಯಿಗಿಂತಲೂ ಹೆಚ್ಚು ಕುಸಿತ ಕಂಡಿವೆ ಎಂದು ಸಚಿವರು ಮಾಹಿತಿ ನೀಡಿದರು. ಇದೇ ವೇಳೆ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮಾತನಾಡಿ, 2020-21ರಲ್ಲಿ ಶೇ 6.2ರಷ್ಟಿದ್ದ ಚಿಲ್ಲರೆ ಹಣದುಬ್ಬರವು 2025-26ರ ವೇಳೆಗೆ ಶೇ 1.9ಕ್ಕೆ ಇಳಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಸ್ಥಿರವಾಗಿದೆ ಎಂದು ಸದನಕ್ಕೆ ತಿಳಿಸಿದರು.

Share This Article
Leave a Comment