ಕಷ್ಟದ ಸಮಯದಲ್ಲಿ ಇರಾನ್ ಜೊತೆ ನಿಂತ ಭಾರತ, ಮೊದಲ ಹಂತದ ತುರ್ತು ವೈದ್ಯಕೀಯ ಸಾಮಾಗ್ರಿಗಳ ರವಾನೆ.

Prakhara News
1 Min Read
Oplus_0

ನವದೆಹಲಿ : ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಂದಾಗಿ ತೀವ್ರ ಬಿಕ್ಕಟ್ಟಿನಲ್ಲಿರುವ ಇರಾನ್ ಬಗ್ಗೆ ಭಾರತ ತನ್ನ ಮಾನವೀಯ ನಿಲುವನ್ನು ವ್ಯಕ್ತಪಡಿಸಿದೆ. ಯುದ್ಧದಿಂದಾಗಿ ಔಷಧಗಳ ಕೊರತೆಯಿಂದ ಬಳಲುತ್ತಿರುವ ಇರಾನಿಗೆ ತುರ್ತು ವೈದ್ಯಕೀಯ ಸಾಮಗ್ರಿಗಳ ಮೊದಲ ಕಂತನ್ನು ಕಳುಹಿಸಿದೆ. ಇರಾನ್ ಸರ್ಕಾರ ಈ ಸಹಾಯವನ್ನು ಅಧಿಕೃತವಾಗಿ ಸ್ವೀಕರಿಸಿರುವುದನ್ನು ದೃಢಪಡಿಸಿದ್ದಲ್ಲದೆ, ಈ ಕಷ್ಟದ ಸಮಯದಲ್ಲಿ ತಮ್ಮ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ವಿಶೇಷ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ.


ಫೆಬ್ರವರಿ 28 ರಿಂದ ನಡೆಯುತ್ತಿರುವ ದಾಳಿಗಳಿಂದಾಗಿ ಇರಾನ್‌ನಲ್ಲಿ ಸಾವಿರಾರು ಜನರು ಗಾಯಗೊಂಡ ನಂತರ ಮತ್ತು ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯಿರುವ ಕಾರಣ ಭಾರತ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ನವದೆಹಲಿಯಲ್ಲಿರುವ ಇರಾನಿನ ರಾಯಭಾರ ಕಚೇರಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿ,’ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿ’ ಭಾರತ ಕಳುಹಿಸಿದ ಸಹಾಯವನ್ನು ಸ್ವೀಕರಿಸಿದೆ ಎಂದು ಬಹಿರಂಗಪಡಿಸಿದೆ. ಇರಾನ್‌ಗೆ ವೈದ್ಯಕೀಯ ನೆರವು ನೀಡುವ ಬಗ್ಗೆ ಘೋಷಿಸಿದ್ದ ಭಾರತೀಯ ವಿದೇಶಾಂಗ ಸಚಿವಾಲಯವು ಆ ದಿಕ್ಕಿನಲ್ಲಿ ತ್ವರಿತ ಕ್ರಮಗಳನ್ನು ಕೈಗೊಂಡು ನೆರವು ನೀಡಿತು. ಭಾರತ, ಚೀನಾ, ರಷ್ಯಾ ಮತ್ತು ಅಜೆರ್ಬೈಜಾನ್‌ನಂತಹ ದೇಶಗಳು ಕೂಡ ಇರಾನ್‌ಗೆ ನೆರವು ನೀಡಿದೆ,

ಅಲ್ಲದೆ ಯುದ್ಧ ವಲಯಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಕೂಡ ಕೇಂದ್ರ ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದೆ.

Share This Article
Leave a Comment