ಕಾರ್ಕಳ: ಹೊಟೇಲ್ ಸಿಬ್ಬಂದಿಯೊಬ್ಬ ಮದ್ಯಪಾನ ಮಾಡಿ ಕೆಲಸ ಮಾಡುತ್ತಿದ್ದ ಕಾರಣಕ್ಕೆ ಮಾಲೀಕ ಗದರಿಸಿದ್ದು ಇದೇ ಕಾರಣಕ್ಕೆ ಸಿಟ್ಟಿಗೆದ್ದ ಸಿಬ್ಬಂದಿ ಮಾಲೀಕನನ್ನೇ ಕತ್ತಿಯಿಂದ ಕಡಿದು ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ.


ಕಾರ್ಕಳದ ಎಣ್ಣೆಹೊಳೆ ಕುಮೇರು ಮನೆ ನಿವಾಸಿ ಸಂತೋಷ್ ಶೆಟ್ಟಿ ಹತ್ಯೆಯಾದ ವ್ಯಕ್ತಿ. ಉತ್ತರ ಪ್ರದೇಶ ಮೂಲದ ಹೊಟೇಲ್ ಸಿಬ್ಬಂದಿ ಮದ್ಯಪಾನ ಮಾಡಿ ಕೆಲಸ ಮಾಡುತ್ತಿದ್ದ ಕಾರಣಕ್ಕೆ ಸಂತೋಷ್ ಅವರು ಬೈದು ಬುದ್ದಿ ಹೇಳಿದ್ದಾರೆ. ಇದನ್ನೂ ಓದಿ: ‘ಪ್ರತಿಯೊಂದು ಅಂತ್ಯಕ್ಕೂ ಹೊಸ ಆರಂಭ ಇರುತ್ತದೆ’ ನಿವೃತ್ತಿ ಬಗ್ಗೆ ಸ್ಪಿನ್ನರ್ ಹೇಳಿದ್ದೇನು? ಇದರಿಂದ ಆಕ್ರೋಶಗೊಂಡ ಆತ ಅಡುಗೆ ಕೋಣೆಯಿಂದ ಕತ್ತಿ ತಂದು ಹತ್ಯೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
