ಬೈಂದೂರು: ಸೇತುವೆಗೆ ಕಂಟೈನರ್ ಲಾರಿಯೊಂದು ಡಿಕ್ಕಿ ಹೊಡೆದು, ಭಾರೀ ಅನಾಹುತವೊಂದು ತಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕಂಬದಕೋಣೆ ಬಳಿ ಅಕ್ಟೋಬರ್ 2ರಂದು ನಡೆದಿದೆ.


ಡಿಕ್ಕಿಯ ರಭಸಕ್ಕೆ ವಾಹನವು ನದಿಗೆ ಬೀಳುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್, ಲಾರಿಯು ಸೇತುವೆಯ ಮೇಲೆಯೇ ನಿಂತಿದೆ. ಇದರಿಂದ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಈ ಕಂಟೈನರ್ ಲಾರಿಯು ಮಂಗಳೂರಿನಿಂದ ಗೋವಾ ಕಡೆಗೆ ಸಾಗುತ್ತಿತ್ತು ಎಂದು ತಿಳಿದುಬಂದಿದೆ.
