ಚಿನ್ನಯ್ಯ ಆರೋಪ ಸತ್ಯ, ನೂರಾರು ಹೆಣಗಳನ್ನು ಹೂತಿಟ್ಟಿರೋದು ನಿಜ: ಗಿರೀಶ್ ಮಟ್ಟಣ್ಣನವರ್

Prakhara News
0 Min Read

ಬೆಂಗಳೂರು: ಬುರುಡೆ ಚಿನ್ನಯ್ಯ ಆರೋಪ ಸತ್ಯ. ನೂರಾರು ಹೆಣಗಳನ್ನು ಹೂತಿಟ್ಟಿರುವುದು ನಿಜ ಎಂಬುದಾಗಿ ಸೌಜನ್ಯ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಗಂಭೀರ ಆರೋಪ ಮಾಡಿದ್ದಾರೆ.

ಇಂದು ವೀಡಿಯೋ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿರುವಂತ ಅವರು, ದೂರುದಾರ ಭಯದಿಂದ ತಪ್ಪು ಸ್ಥಳ ತೋರಿಸಿದ್ದಾನೆ. ಭಯದಿಂದ ಸ್ಥಳಗಳನ್ನು ಗುರುತಿಸುವಲ್ಲಿ ಎಡವಿದ್ದಾನೆ. ಎಸ್ಐಟಿ ವಿಚಾರಣೆಗೆ ಕರೆದ್ರೆ ಸಂಭ್ರಮದಿಂದ ಹೋಗುತ್ತೇನೆ ಎಂದರು.

ದೂರುದಾರನಿಗೆ ರಕ್ಷಣೆ ಕೊಟ್ಟಿದ್ದು ನಾವೇ. ಇಷ್ಟು ದೊಡ್ಡ ಸಾಕ್ಷಿಗೆ ಯಾರೂ ಬೆಂಬಲಿಸಲ್ಲ. ನಾವು ಧೈರ್ಯವಾಗಿ ಮುಂದೆ ನಿಂತೆವು. ತಿಮರೋಡಿ ನ್ಯಾಯದ ಪರವಾಗಿ ಇರೋರು ಎಂದರು.

Share This Article
Leave a Comment