ಪೌರಾಯುಕ್ತಗೆ ಧಮ್ಮಿ ಹಾಕಿ ಪರಾರಿಯಾಗಿದ್ದ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಕೇರಳ ಗಡಿಯಲ್ಲಿ ಬಂಧನ: ಮಂಗಳೂರಿನಲ್ಲಿ ತನ್ನ ಕಾರು ಬಿಟ್ಟು ಕೇರಳ ಕಡೆ ಪಲಾಯನ

Prakhara News
1 Min Read

ಬೆಂಗಳೂರು: ಶಿಡ್ಲಘಟ್ಟ ಪೌರ ಆಯುಕ್ತಗೆ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 13 ದಿನಗಳಿಂದ ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ನಡೆಯುತ್ತಿತ್ತು,ಸೋಮವಾರ ಸಂಜೆ ಕೇರಳ ಗಡಿಯಲ್ಲಿ ಸೆರೆ ಹಿಡಿಯಲಾಗಿದೆ.
ಪ್ಲೆಕ್ಸ್ ಕಿತ್ತು ಹಾಕಿದರೆಂಬ ಕಾರಣಕ್ಕೆ ರಾಜೀವ್‌ಗೌಡ ಅವರು ಕರೆ ಮಾಡಿ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತ ಅಮೃತ ಅವರಿಗೆ ಅವಾಶ್ಯ ಶಬ್ದಗಳಿಂದ ನಿಂದಿಸಿ ಧಮ್ಮಿ ಹಾಕಿದ್ದರು. ಅಮೃತ ಅವರು ರಾಜೀವ್‌ಗೌಡ ವಿರುದ್ಧ ಶಿಡ್ಲಘಟ್ಟ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಂಧನ ಭೀತಿಯಿಂದ ರಾಜೀವ್‌ಗೌಡ ಪರಾರಿಯಾಗಿದ್ದನು.

ಚಿಕ್ಕಬಳ್ಳಾಪುರಕ್ಕೆ ಕರೆತರುತ್ತಿರುವ ಪೊಲೀಸರು
ಕಳೆದ 13 ದಿನಗಳಿಂದ ಪೊಲೀಸರು ರಾಜೀವ್ ಗೌಡ ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದರು. ಮಂಗಳೂರಿನ ಬಳಿ ಇರಬಹುದು ಎಂದು ಸುಳಿವು ಸಿಕ್ಕ ಹಿನ್ನೆಲೆ ಅಲ್ಲಿ ತಪಾಸಣೆ ನಡೆಸಿದ್ದರು. ಬಳಿಕ ಸೋಮವಾರ ಮಧ್ಯಾಹ್ನ ಕೇರಳಕ್ಕೆ ಪರಾರಿಯಾಗಲು ಮುಂದಾಗಿದ್ದ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

Share This Article
Leave a Comment