ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ನಿಶಾನ್ ಪೂಜಾರಿ ಮರು ಆಯ್ಕೆ.

Prakhara News
1 Min Read

ಮಂಗಳೂರು : ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಪಾಧ್ಯಕ್ಷರಲ್ಲಿ ಓರ್ವರಾಗಿ ನಿಶಾನ್ ಪೂಜಾರಿ ಅವರು ಮರು ಆಯ್ಕೆಯಾಗಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ್ರ ಅವರ ಮಾರ್ಗದರ್ಶನ ಹಾಗೂ ಆದೇಶದ ಮೇರೆಗೆ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಸತೀಶ್ ಕುಂಪಲ ಅವರು ಯುವ ಮೋರ್ಚಾದ ನೂತನ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಯುವ ಉದ್ಯಮಿಯಾಗಿರುವ ನಿಶಾನ್ ಪೂಜಾರಿ ಯವರು ತನ್ನನು ಹಲವಾರು ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ  ಕಾರ್ಯಗಳಲ್ಲಿ  ತನ್ನನು ತೊಡಗಿಸಿಕೊಂಡಿದ್ದು ಜಪ್ಪಿನಮೊಗರು ಕಂಬಳದ ಕಾರ್ಯಾಧ್ಯಕ್ಷರಾಗಿ ಯಶಸ್ವಿಯಾಗಿ ಕಂಬಳವನ್ನು ನಡೆಸಿಕೊಂಡು ಬರುತ್ತಾ ಇದ್ದಾರೆ.

Share This Article
Leave a Comment