ಬಂಟ್ವಾಳ: ಗಣೇಶೋತ್ಸವ ಕಾರ್ಯಕ್ರಮಕ್ಕೆ ಅಳವಡಿಸಿ ಬ್ಯಾನರನ್ನು ಹರಿದ ಆರೋಪಿ ವಶಕ್ಕೆ

Prakhara News
1 Min Read

ಬಂಟ್ವಾಳ: ಇಲಾಖೆಯಿಂದ ಪೂರ್ವಾನುಮತಿ ಪಡೆದು ಗಣೇಶೋತ್ಸವ ಕಾರ್ಯಕ್ರಮಕ್ಕೆ ಶುಭಕೋರುವ ಬ್ಯಾನರನ್ನು ಅಳವಡಿಸಿದ್ದು ವ್ಯಕ್ತಿಯೋರ್ವ ಬ್ಯಾನರನ್ನು ಹರಿದು ಹಾಕಿದ ಆರೋಪಿಯನ್ನು ವಶಕ್ಕೆ ಪಡೆದ ಘಟನೆ ಬಂಟ್ವಾಳ ಫರಂಗಿಪೇಟೆಯಲ್ಲಿ ನಡೆದಿದೆ.

ಆರೋಪಿಯನ್ನು ಫರಂಗಿಪೇಟೆಯ ನಿವಾಸಿ ಹೈದರ್ ಎಂದು ಗುರುತಿಸಲಾಗಿದೆ.

ಬಂಟ್ವಾಳ ಫರಂಗಿಪೇಟೆ ನಿವಾಸಿ ಚಂದ್ರಶೇಖರ್ ಆಳ್ವ (55) ಎಂಬವರು, ಪರಂಗಿಪೇಟೆ ಸೇವಾಂಜಲಿ ಭವನದಲ್ಲಿ ಆ.24ರಿಂದ ಆ.29ರವರೆಗೆ ನಡೆಯುವ ಗಣೇಶೋತ್ಸವ ಕಾರ್ಯಕ್ರಮಕ್ಕೆ ಶುಭಕೋರುವ ಬ್ಯಾನರನ್ನು, ಅಗತ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆದು, ಆ.25ರಂದು ರೂ 3,500/- ವೆಚ್ಚದಲ್ಲಿ ಪರಂಗಿಪೇಟೆಯ ಕುಂಪಣ ಮಜಲು ಕ್ರಾಸ್ ಬಳಿ ಬ್ಯಾನರ್ ಅಳವಡಿಸಿರುತ್ತಾರೆ. ಆ ಬ್ಯಾನರನ್ನು ಆ.27ರಂದು ರಾತ್ರಿ ವೇಳೆ, ಫರಂಗಿಪೇಟೆಯ ನಿವಾಸಿ ಹೈದರ್ ಎಂಬಾತನು ಹರಿದು ಹಾಕಿ ಸುಮಾರು 3,500/- ರೂ ನಷ್ಟವನ್ನುಂಟು ಮಾಡಿರುವುದಲ್ಲದೇ, ಧಾರ್ಮಿಕ ಭಾವನೆಗೆ ದಕ್ಕೆಪಡಿಸಿ, ಈ ಕೃತ್ಯದಿಂದಾಗಿ ಸಾರ್ವಜನಿಕರು ಪ್ರಚೋದನೆಗೊಂಡು ಗಲಭೆ ಏಳಬಹುದೆಂದು ತಿಳಿದಿದ್ದರೂ ಕೂಡಾ, ಉದ್ದೇಶಪೂರ್ವಕವಾಗಿ ಕೃತ್ಯ ನಡೆಸಿ ಸಾರ್ವಜನಿಕ ವಲಯದಲ್ಲಿ ಭೀತಿಯನ್ನುಂಟು ಮಾಡಿರುತ್ತಾನೆ.

ಈ ಬಗ್ಗೆ ನೀಡಿದ ದೂರಿನ ಮೇರೆಗೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ:129/2025, ಕಲಂ: 299,192,353 (1), (b),57,324(4) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿ ಹೈದರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment