ಮಂಗಳೂರಿನ ಸ್ವಸ್ತಿಕಾ ಬಿಸಿನೆಸ್ ಸ್ಕೂಲ್ ರಾಜ್ಯದ ಮೊದಲ ಎಐ ಎನೇಬಲ್ಡ್ ಕ್ಯಾಂಪಸ್ ; ಪಿಜ್ಜಾ ಬೆಲೆಯಲ್ಲಿ 50ಕ್ಕೂ ಹೆಚ್ಚು ಎಐ ಟೂಲ್ ಕಲಿತುಕೊಂಡ ವಿದ್ಯಾರ್ಥಿಗಳು

Prakhara News
2 Min Read

ಮಂಗಳೂರು : ಮಂಗಳೂರಿನಸ್ವಸ್ತಿಕಾ ಇಂಟರ್ನ್ಯಾಶನಲ್ ಬಿಸಿನೆಸ್ ಸ್ಕೂಲ್ ರಾಜ್ಯದ ಮೊದಲ ಎಐ ಎನೇಬಲ್ಡ್ ಕ್ಯಾಂಪಸ್ ಎಂಬ ಹೆಗ್ಗಳಿಕೆಯನ್ನ ಪಡೆದಿದೆ. ಕಾಲೇಜಿನ ವಿದ್ಯಾರ್ಥಿಗಳು ಎಐ ಟೆಕ್ನಾಲಜಿ ಬಳಸಿ ಕೆಲವೇ ಕ್ಷಣಗಳಲ್ಲಿ ಕೃತಕ ಟೂಲ್ಸ್ ಕ್ರಿಯೇಟ್ ಮಾಡುವುದನ್ನು ಕಲಿತುಕೊಂಡಿದ್ದಾರೆ.

ಸ್ವಸ್ತಿಕ್ ಕಾಲೇಜಿನ ವಿದ್ಯಾರ್ಥಿಗಳು ತಾವಾಗಿಯೇ ಎಐ ಟೂಲ್ಸ್ ಗಳನ್ನು ರೆಡಿ ಮಾಡುತ್ತಿದ್ದಾರೆ. ಫಿಪ್ ಕಾರ್ಟ್ ರೀತಿಯ ಆನೈನ್ ವೆಬ್ ತಾಣಗಳನ್ನು ಸೃಷ್ಟಿಸುತ್ತಿದ್ದಾರೆ. ධ∞ ಕಾರ್ಡ್ ಬಳಸಿಕೊಂಡು ಅತಿ ಕಡಿಮೆ ಖರ್ಚಿನಲ್ಲಿ ತಮ್ಮನ್ನೇ ಬೂಸ್ಟ್ ಮಾಡುತ್ತಿದ್ದಾರೆ. ಕೇವಲ ಒಂದು ಪಿಜ್ಜಾ, ಬರ್ಗರ್ ಗೆ ಮಾಡೋ ಖರ್ಚಿನಲ್ಲಿ ತಮ್ಮ ಭವಿಷ್ಯವನ್ನೇ ರೂಪಿಸಬಲ್ಲ ಟೆಕ್ನಾಲಜಿಯನ್ನು ತಿಳಿದುಕೊಂಡಿದ್ದಾರೆ.

ಇಷ್ಟು ಸುಲಭದಲ್ಲಿ ವೆಬ್ ಸೈಟ್ ಕ್ರಿಯೇಟ್ ಮಾಡೋಕೆ, ಕಂಟೆಂಟ್ ಸೃಷ್ಟಿಸಲು ಆಗುತ್ತೆ ಎಂದುಕೊಂಡಿರಲಿಲ್ಲ. ಎಐ ಅಂದ್ರೆ ಅದೇನೋ ಮಿಸ್ ಯೂಸ್ ಮಾಡೋಕೆ ಬಳಸುತ್ತಾರೆ ಅನ್ನೊಂಡಿದ್ದೆವು. ಎಐ ಬಳಸಿ ಸಾಂಗ್ ಕ್ರಿಯೇಟ್ ಮಾಡಿದ್ದು ನೋಡಿದರೆ ಎಲ್ಲಿಯೋ ಸ್ಟುಡಿಯೋದಲ್ಲಿ ಕುಳಿತೇ ಮಾಡಿದ್ದು ಅನ್ನುವ ರೀತಿ ಫೀಲ್ ಆಗತ್ತೆ ಎಂದು ಅಲ್ಲಿನ ವಿದ್ಯಾರ್ಥಿಗಳು ಹೇಳುತ್ತಾರೆ.

ಇಮೇಜ್ ಸಾಂಗ್ ಕ್ರಿಯೇಶನ್, ವಿಡಿಯೋ, ಫೋಟೋ ಸೃಷ್ಟಿಸುವುದು, ವಿಡಿಯೋ ಎಡಿಟಿಂಗ್, ವಿಶ್ವಲ್ ಆರ್ಟ್ ರಚಿಸುವುದಕ್ಕೆ ಟೂಲ್ಸ್ ರೆಡಿ ಮಾಡಬಹುದು. ಮೀಟಿಂಗ್ ಇದ್ದರೆ ಅದರ ಪಾಯಿಂಟ್ ಮಾಡಿಕೊಳ್ಳುವುದಕ್ಕೂ ಪ್ರತ್ಯೇಕ ಏಪ್ಸ್ ರೆಡಿ ಮಾಡಿಕೊಳ್ಳಬಹುದು. ದೊಡ್ಡ ಪಿಡಿಎಫ್ ಫೈಲ್ ಇದ್ದರೆ ಅದರಿಂದ ಸಾರಾಂಶ ಪಡೆಯಲು ಎಐ ಟೂಲ್ಸ್ ಇದೆ, ಎಕ್ಸೆಲ್ ಫೈಲ್ ಇದ್ದರೆ ಅದರಿಂದ ಕ್ಷಣಾರ್ಧದಲ್ಲಿ ಮಾಹಿತಿ ಸಂಗ್ರಹಿಸುವುದು ಇತ್ಯಾದಿ ಹತ್ತು ಹಲವು ಕ್ಷೇತ್ರಗಳಲ್ಲಿ ಕಠಿಣ ಕೆಲಸಗಳನ್ನು ಅತ್ಯಂತ ಸುಲಭ ಮಾಡಿಕೊಳ್ಳಲು ಎಐನಿಂದ ಸಾಧ್ಯವಿದೆ.

ಈ ಕಾರಣದಿಂದ ಎಐ ಕಾರ್ಡ್ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಭವಿಷ್ಯ ರೂಪಿಸುವುದಲ್ಲ, ಶಾಲೆಗಳಲ್ಲಿ ಶಿಕ್ಷಕಿಯರು, ಕಾಲೇಜು ಉಪನ್ಯಾಸಕರು, ವಕೀಲರು, ಪತ್ರಕರ್ತರು, ಐಟಿ ವೃತ್ತಿಪರರು, ಎಕ್ಸಿಕ್ಯುಟಿವ್ ಗಳು, ಚಾರ್ಟೆಡ್ ಅಕೌಂಟೆಂಟ್, ವಿಡಿಯೋ- ಕಂಟೆಂಟ್ ಕ್ರಿಯೇಟರ್ಸ್, ಬ್ಯಾಂಕರುಗಳು ಹೀಗೆ ಯಾವುದೇ ಕ್ಷೇತ್ರದಲ್ಲಿದ್ದರೂ, ಎಐ ಟೂಲ್ಸ್ ಬಳಸಿ ತಮ್ಮ ಕೆಲಸವನ್ನು ಮತ್ತಷ್ಟು ಸುಲಭ ಮಾಡಿಕೊಳ್ಳಬಹುದು. ಅಂತ್ರೋಪಿಕ್ ಎನ್ನುವ ಎಐ ಟೂಲ್ಸ್ ಸೃಷ್ಟಿಸಿ ಅಮೆರಿಕ ಸೇರಿ ಇಡೀ ಜಗತ್ತಿನಲ್ಲಿ ಷೇರು ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲ ಮಾಡಿದ್ದನ್ನು ನಾವು ನೋಡಿದ್ದೇವೆ. ಈ ಕೆಲಸವನ್ನು ಬೆಂಗಳೂರಿನಲ್ಲಿ ಕುಳಿತು ರಾಹುಲ್ ಪಾಟೀಲ್ ಎಂಬವರು ಮಾಡಿದ್ದಾರೆ. ಇದಕ್ಕೆ ಬಳಸಿಕೊಂಡಿದ್ದು ಒಂದ್ರೂಪಾಯಿ ಖರ್ಚೂ ಇಲ್ಲದ ಕೇವಲ ತನ್ನದೇ ಬುದ್ದಿಮತ್ತೆಯನ್ನು ಮಾತ್ರ ಅನ್ನೋದು ಸತ್ಯ.

Share This Article
Leave a Comment