ಚಿತ್ರದುರ್ಗ : ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತ ,3 ಮಂದಿ ಪೊಲೀಸ್ RSI ಅಧಿಕಾರಿಗಳು ಸಾವು.

Prakhara News
1 Min Read

ಚಿತ್ರದುರ್ಗ : ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ 3 ಮಂದಿ ಪೊಲೀಸ್ RSI ಅಧಿಕಾರಿಗಳು ಸಾವನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಹೆಗ್ಗೆರೆ ಗೇಟ್ ಬಳಿ ನಡೆದಿದೆ.

ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ್ದು 3 ಮಂದಿ ಪೊಲೀಸ್ RSI ಅಧಿಕಾರಿಗಳು ಸಾವನ್ನಪ್ಪಿದ್ದಾರೆ.ಮೃತರನ್ನು RSI ಮಂಜುನಾಥ್, RSI ಸಚ್ಚಿನ್, RSI ಅಮರೇಶ್ ಎಂದು ತಿಳಿದುಬಂದಿದೆ.RSI ಮಹಂತೇಶ್ , PSI ಈಶ್ವರ್ ಸ್ಥಿತಿ ಚಿಂತಾಜನಕವಾಗಿದ್ದು ದಾವಣಗೆರೆ ಖಾಸಗಿ ಆಸ್ಪತ್ರೆಗೆ ಗಾಯಾಳು ರವಾನಿಸಲಾಗಿದೆ.

ಮೃತರ ಪೈಕಿ ಮಂಜುನಾಥ್ ಹಾಗೂ ಸಚ್ಚಿನ್ ಮದುವೆ ನಿಶ್ಚಯವಾಗಿತ್ತು.ಇವರೆಲ್ಲ ಬಳ್ಳಾರಿಗೆ ಸ್ನೇಹಿತನ ಮದುವೆ ತೆರಳುತ್ತಿದ್ದರು ಆಕ್ಸಿಡೆಂಟ್ ಸಂಬವಿಸುತ್ತಿದ್ದಂತೆ ಸುಮಾರು 300 ಮೀಟರ್ ದೂರ ಲಾರಿ ಎಳೆದೊಯ್ಯದಿದ್ದು ಅಧಿಕಾರಿಗಳು ಲಾರಿ ಅಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಲಾರಿ ಎಳೆದೊಯ್ದ ರಭಸಕ್ಕೆ ಮೂವರು ಪೊಲೀಸ್ ಅಧಿಕಾರಿಗಳ ಪ್ರಾಣಪಕ್ಷಿ ಹಾರಿ ಹೋಗಿದ್ದು ಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರೂ ಹಾಗೂ 20 ಮಂದಿ ಪಿಎಸ್ಐ ಸ್ನೇಹಿತರು ದೌಡಾಯಿಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment