ಮಂಗಳೂರು : ತುಳು ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ ಹೊರಬಿದ್ದಿದ್ದು, ತುಳು ಸಿನಿಮಾ ನಿರ್ದೇಶಕ ಸೂರಜ್ ಬೋಳಾರ್ ಅವರು ನಿಧನರಾಗಿದ್ದಾರೆ.


ದಿವಂಗತ ಆನಂದ ಬೋಳಾರ್ ಅವರ ಪುತ್ರರಾಗಿರುವ ಸೂರಜ್ ಬೋಳಾರ್ ಅವರು ತಂದೆಯ ಕಲಾ ಹಾದಿಯಲ್ಲೇ ಮುನ್ನಡೆದು ತುಳು ಚಿತ್ರರಂಗದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದರು. ಪತ್ತಿಸ್ ಗ್ಯಾಂಗ್ ಎಂಬುವ ತುಳು ಚಿತ್ರವನ್ನು ನಿರ್ದೇಶಿಸಿದ್ದ ಸೂರಜ್ ಬೋಳಾರ್ ಟಾಕೀಸ್ ಒಟಿಟಿ ಸಂಸ್ಥೆಯಲ್ಲಿ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿ ಹಲವಾರು ವೆಬ್ ಸೀರಿಸ್ ಗಳನ್ನು ನಿರ್ದೇಶನ ಮಾಡಿದ್ದರು.

ಸೂರಜ್ ಬೋಳಾರ್ ಅವರ ನಿಧನದ ಸುದ್ದಿ ತಿಳಿದು ತುಳು ಚಿತ್ರರಂಗದ ಕಲಾವಿದರು, ತಂತ್ರಜ್ಞರು ಹಾಗೂ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆಯಿಂದ ತುಳು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಅಂತಿಮ ವಿಧಿ ವಿಧಾನಗಳು ಇಂದು ಬೆಂಗಳೂರಿನ ಅವರ ಸ್ವಗೃಹದಲ್ಲಿ ನಡೆಯಲಿದೆ.




