“ಬನ” ತುಳು ಚಿತ್ರಕ್ಕೆ 25 ರ ಸಂಭ್ರಮ

Prakhara News
1 Min Read

ಪುತ್ತೂರು : ನಮ್ಮೂರಿನ ಯುವಕ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನ ಮಾಡಿರುವ ಬನ ಈ ಮಣ್ಣಿದ ಕಥೆ ನಿಜವಾಗಲೂ ಈ ಮಣ್ಣಿನ ಕಥೆಯಾಗಿದೆ. ಇಲ್ಲಿನ ನಾಗಾರಾಧನೆಯ ಕಥೆಯನ್ನು ಸೇರಿಸಿಕೊಂಡು ಮಾಡಿರುವ ಕುಟುಂಬ ಸಮೇತರಾಗಿ ನೋಡಬೇಕಾದ ಸಿನಿಮಾ ಇದಾಗಿದೆ.

ನಿತಿನ್ ನಮ್ಮ ಮನೆಯ ಹುಡುಗ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆಯಾಗುತ್ತದೆ. ಇವರು ಈಗಾಗಲೇ ಧರ್ಮದೈವ, ಧರ್ಮಚಾವಡಿಯಂತಹ ಉತ್ತಮ ಸಿನಿಮಾಗಳನ್ನು ಮಾಡಿದ್ದು ಅದೇ ಸಾಲಿನಲ್ಲಿ ‘ಬನ’ ಕೂಡ ಉತ್ತಮ ಸಿನಿಮಾ ಆಗಿದೆ. ನಾವೆಲ್ಲರೂ ಸಿನಿಮಾ ನೋಡುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು, ಈ ಸಿನಿಮಾ ನೂರು ದಿನ ಪೂರೈಸಲಿ ಎಂದು ಧಾರ್ಮಿಕ ಮುಖಂಡ, ಪುತ್ತೂರು ಅಯ್ಯಪ್ಪ ದೀಪೋತ್ಸವ ಸಮಿತಿ ಅಧ್ಯಕ್ಷ ನುಳಿಯಾಲು ರವೀಂದ್ರ ಶೆಟ್ಟಿಯವರು ಹೇಳಿದರು.

ಅವರು ನ.16 ರಂದು ಪುತ್ತೂರು ಜಿ.ಎಲ್1 ಮಾಲ್‌ನ ಭಾರತ್‌ ಸಿನಿಮಾಸ್‌ನಲ್ಲಿ ನಡೆದ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ ‘ಬನ’ ಈ ಮಣ್ಣಿದ ಕಥೆ ತುಳು ಸಿನಿಮಾದ 25ನೇ ದಿನದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಧಕೃಷ್ಣ ಬೋರ್ಕರ್, ಕಾವು ಹೇಮನಾಥ ಶೆಟ್ಟಿ, ಪದ್ಮನಾಭ ಶೆಟ್ಟಿ ಮತ್ತು ಮನ್ಮಥ ಶೆಟ್ಟಿ ರವರು ಭಾಗವಹಿಸಿದರು.

ಸಿನಿಮಾ 25 ದಿನಗಳನ್ನು ಪೂರೈಸಿರುವ ಸಂತಸದಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಲಾಯಿತು. ಸೇರಿರುವ ಅತಿಥಿಗಳು ಹಾಗೂ ಚಿತ್ರತಂಡ ಮತ್ತು ಪ್ರೇಕ್ಷಕರು ಜೊತೆಯಾಗಿ ಕೇಕ್ ಕತ್ತರಿಸಿ ಪರಸ್ಪರ ಹಂಚುವ ಮೂಲಕ ಸಂಭ್ರಮಿಸಲಾಯಿತು.

ಜಿಎಲ್1 ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಬನ ಸಿನಿಮಾ ಬಿಡುಗಡೆಗೊಂಡ ಬಳಿಕ ಈ 25 ದಿನಗಳಲ್ಲಿ ಬರೋಬ್ಬರಿ 40 ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡಿದೆ ಎಂದು ಸಿನಿಮಾ ನಟ ಶರತ್ ಆಳ್ವ ಕೊರೇಲು ತಿಳಿಸಿದರು. ಇದೇ ರೀತಿ ಮುಂಬೈನಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದ್ದು ಕಾಸರಗೋಡಿನಲ್ಲೂ ಜನ ಬನ ಸಿನಿಮಾವನ್ನು ಮೆಚ್ಚಿಕೊಂಡಿದ್ದು ಅಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದೇ ರೀತಿ ಚಿತ್ರ ಬಿಡುಗಡೆಗೊಂಡ ಎಲ್ಲಾಕಡೆಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.ಸಿನಿಮಾ ಪ್ರೇಕ್ಷಕರು ಒಳ್ಳೆಯ ಸಪೋರ್ಟ್ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.

Share This Article
Leave a Comment