ನಾಟೆಕಲ್ ಜಂಕ್ಷನ್‌ನಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ : ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಂದ ಧ್ವಜಾರೋಹಣ

Prakhara News
2 Min Read

ಉಳ್ಳಾಲ: ಕರ್ನಾಟಕ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಯೂತ್ ಫೋರಂ ಮಂಗಳೂರು ಇದರ ಆಶ್ರಯದಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ನಾಟೆಕಲ್ ಜಂಕ್ಷನ್‌ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, “ನನಗೆ ವಿದ್ಯಾಭ್ಯಾಸ ಇಲ್ಲದಿದ್ದರೂ ಶಾಲೆಯ ಎಸ್‌ಡಿಎಂಸಿ ಸದಸ್ಯನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು. 2023ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು. ನಂತರ ಪದ್ಮಶ್ರೀ ಪ್ರಶಸ್ತಿಯೂ ದೊರೆಯಿತು. ಇದೆಲ್ಲದಕ್ಕೂ ಕಾರಣ ನೀವು ನೀಡಿದ ಪ್ರೀತಿ, ಪ್ರೋತ್ಸಾಹ ಮತ್ತು ಸಹಕಾರ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಹಾಗೂ ಯೂತ್ ಫೋರಂ ಮಂಗಳೂರು ಸ್ಥಾಪಕ ಅಧ್ಯಕ್ಷರಾದ ಮೌಶೀರ್ ಅಹ್ಮದ್ ಸಾಮಣಿಗೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡ ನಾಡು, ನುಡಿ ಮತ್ತು ನೆಲದ ಸಂರಕ್ಷಣೆಗಾಗಿ ನಡೆಸಿದ ಹೋರಾಟ, ಸೇವೆ ಹಾಗೂ ತ್ಯಾಗವನ್ನು ಸ್ಮರಿಸಿದರು. ಕನ್ನಡ ನಾಡಿನ ಇತಿಹಾಸ ಮತ್ತು ಭಾಷೆಯ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಇತಿಹಾಸ ಪ್ರಸಿದ್ಧ ಸಯ್ಯದ್ ಮದನಿ ದರ್ಗಾದ ಅಧ್ಯಕ್ಷ ಹನೀಫ್ ಹಾಜಿ, ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮೇಯರ್ ಕೆ ಅಶ್ರಫ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಕರವೇ ಮಾಜಿ ಅಧ್ಯಕ್ಷರಾದ ನ್ಯಾಯವಾದಿ ಅರುಣ್ ಬಂಗೇರ, ನ್ಯಾಯವಾದಿ ಮೋಹನ್ ದಾಸ್ ರೈ, ಪ್ರಮೋದ್ ಬಲ್ಲಾಳ್ ಬಾಗ್, ಕರವೇ ಕಾನೂನು ಸಲಹೆಗಾರ ನ್ಯಾಯವಾದಿ ಆಸ್ಗರ್ ಮುಡಿಪು,ಕಸಾಪ ಅಧ್ಯಕ್ಷ ಎಂ.ಪಿ. ಶ್ರೀನಾಥ್, ಇಬ್ರಾಹಿಂ ಕೊಡಿಜಾಲ್, ಹೈದರ್ ಪರ್ತಿಪ್ಪಾಡಿ, ಟಿ.ಎಸ್. ಅಬ್ದುಲ್ಲಾ ಹಾಜಿ, ಅಬೂಬಕ್ಕರ್ ನಾಟೆಕಲ್, ಸೌಕತ್ ಆಲಿ ಕೋಣಾಜೆ,ಫಾರೂಕ್ ಉಳ್ಳಾಲ, ಅಬೂಬಕ್ಕರ್ ಹಾಜಿ ನಾಟೆಕಲ್, ಎಸಿಪಿ ವಿಜಯ ಕಾಂತಿ, ಕರವೇ ಉಡುಪಿ ಜಿಲ್ಲಾಧ್ಯಕ್ಷ ಆರ್. ಪ್ರಭಾಕರ್ ಪೂಜಾರಿ,ಉಡುಪಿ ಕರವೇ ಮಹಿಳಾ ನಾಯಕರಾದ. ಗೀತಾ ಪೂಜಾರಿ,ಜಯ ಶ್ರಿ ಸುವರ್ಣ,ಸುನಂದ ಕೋಟ್ಯಾನ್ ಮುಹಮ್ಮದ್ ಪುಷ್ಟಿ, ಸಿ.ಎಂ. ಸತ್ತಾರ್, ರಝಿಯಾ ಇಬ್ರಾಹಿಂ, ಬಾವಾ ಹಾಜಿ ನಾಟೆಕಲ್, ಅಂತರಾಷ್ಟ್ರೀಯ ಖ್ಯಾತಿಯ ನಿರೂಪಕ ಶಾಹಿಲ್ ಝಾಯೀರ್,ಕೆ.ಎಂ ಸಿದ್ದೀಕ್ ಮೊಂಟುಗೋಳಿ, ಕುಞಮೋನು ಹಾಜಿ ನಾಟೆಕಲ್ ವುಡ್, HIF ಅಧ್ಯಕ್ಷ ರಿಜ್ವಾನ್ ಪಾಂಡೇಶ್ವರ್, ಕಸಾಪ ತಾಲೂಕು ಅಧ್ಯಕ್ಷ ಸೂರಜ್ ರೇವಣ್ಕರ್, NSUI ಯು.ಟಿ. ಫರೀದ್, ಅಶ್ರಫ್ ಉಳ್ಳಾಲ, ಡಿ.ಐ. ಅಬೂಬಕ್ಕರ್ ಕೈರಂಗಳ, ಟಿ.ಎಂ. ಬಾವ, ಪ್ರಾಂಕಿ ಕುಟಿನಾ, ಹಮೀದ್ ಹಸನ್ ಮಾಡೂರು,ಅಬ್ದುಲ್ಲಾ ರೇಂಜಾಡಿ, ಇಕ್ಬಾಲ್ ಹುಬ್ಬಳ್ಳಿ ಸೇರಿದಂತೆ ಹಲವು ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.

ಕರವೇ ಜಿಲ್ಲಾ ಯುವ ಮುಖಂಡ ರಾಝಿಕ್ ಆತೂರ್ ಸ್ವಾಗತ ಭಾಷಣ ಮಾಡಿದರು. ಅಮಿತಾ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ರಾಝಿಕ್ ಟೋಕಿಯೋ ಕೊಣಾಜೆ ವಂದಿಸಿದರು.

ಯೂತ್ ಫೋರಂ ಗೌರವಾಧ್ಯಕ್ಷ ಸಿರಾಜ್ ಅಭಯ, ಅಧ್ಯಕ್ಷ ಆರ್.ಕೆ. ರಿಯಾಝ್, ನಝೀರ್ ಬಾರ್ಲಿ, ಇಮ್ರಾನ್ ನಂದಾವರ ಹಾಗೂ ಇರ್ಷಾದ್ ಸೋಲಾರ್ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

Share This Article
Leave a Comment