ಪುತ್ತೂರು: ಕಳೆದ 27 ವರ್ಷಗಳಿಂದ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ನಗುಮೊಗದ ಸೇವೆಯನ್ನು ನೀಡುತ್ತಾ ಬರುತ್ತಿರುವ ಹೆಸರಾಂತ ಶೇಟ್ ಎಲೆಕ್ಟ್ರಾನಿಕ್ಸ್ ಈ ಭಾರಿ ಪುತ್ತೂರಿನ ಜೈನ ಭವನದಲ್ಲಿ ನವಂಬರ್ 1ರಿಂದ 13 ರವರೆಗೆ ದೀಪಾವಳಿ ಮಹಾ ಮಾರಾಟ ಮೇಳ ನಡೆಸುತ್ತಿದ್ದಾರೆ.


ಈ ಮಹಾ ಮಾರಾಟ ಮೇಳದ ವಿಶೇಷತೆ ಏನೆಂದರೆ ಪ್ರತೀದಿನ ಖಚಿತ ಚಿನ್ನದ ನಾಣ್ಯವನ್ನು ಗೆಲ್ಲುವ ಅವಕಾಶವಿದ್ದು ಜೊತೆಗೆ ಪ್ರತೀ ಖರೀದಿಗೆ 5 ಅಚ್ಚರಿಯ ಉಡುಗೊರೆಗಳನ್ನು ನಿಮದಾಗಿಸಿಕೊಳ್ಳಬಹುದು.

ಮಾರಾಟದ ನಂತರವೂ ಪರಿಪೂರ್ಣ ಸರ್ವೀಸ್, ವಿವಿಧ ಕಂಪನಿಗಳ, ಹೊಸ ಮಾಡೆಲ್ ಗಳ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ವಿಶಾಲ ಪ್ರದರ್ಶನ, ಹೊಸ ಹೊಸ ವಿನ್ಯಾಸದ ಫರ್ನೀಚರ್ ಗಳ ಅಗಾಧ ಸಂಗ್ರಹ ಹಾಗೂ ಹಲವು ಪ್ರಮುಖ ಕಂಪೆನಿಯ ಸಹಯೋಗದೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯ ನೀಡಲಾಗುತ್ತಿದ್ದು ಇದುವೇ ಶೇಟ್ ಎಲೆಕ್ಟ್ರಾನಿಕ್ಸ್ ದೀಪಾವಳಿ ಮಹಾಮೇಳದ ವಿಶೇಷತೆ.

ಅಲ್ಲದೆ ಪ್ರತೀ ರೂಪಾಯಿ 2000/- ಮೇಲ್ಪಟ್ಟ ಖರೀದಿಯ ಮೇಲೆ ಕೂಪನ್ ಪಡೆದು ಟಿವಿಎಸ್ ಜುಪಿಟರ್ ವಾಹನ ಗೆಲ್ಲುವ ಅವಕಾಶವಿದೆ. ಗ್ರಾಹಕರು ಈ ದೀಪಾವಳಿ ಮಹಾ ಮಾರಾಟ ಮೇಳದ ಸದುಪಯೋಗ ಪಡೆದುಕೊಳ್ಳಬೇಕೆಂದು ಮಾಲಕರಾದ ರೂಪೇಶ್ ಶೇಟ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




