‘ಗಾಮಿನಿ ಕನ್ನಡ ಹಾರರ್ ಚಲನಚಿತ್ರ ರಾಜ್ಯಾದ್ಯಂತ ನಾಳೆ ತೆರೆಗೆ : ತಾಯಿ ಮಮತೆ, ಹಾಸ್ಯ, ಪ್ರೇಮಕಥೆ ಹೊತ್ತ, ಕರಾವಳಿ ಕಲಾವಿದರೇ ನಿರ್ಮಿಸಿದ ಸಿನಿಮಾದ ಪೋಸ್ಟರ್ ಪುತ್ತೂರಿನಲ್ಲಿ ಬಿಡುಗಡೆ

Prakhara News
1 Min Read

ಪುತ್ತೂರು: ತಾಯಿಯ ಮಮತೆ, ಹಾಸ್ಯ, ಪ್ರೇಮ ಕಥೆಯೊಂದಿಗೆ ಕರಾವಳಿಯ ಕಲಾವಿದರು ಅಭಿನಯ ಮಾಡಿರುವ ಕನ್ನಡದ ಹಾರರ್ ಚಲನಚಿತ್ರ `ಗಾಮಿನಿ’ ಅ. 30ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಬುಧವಾರ ಗಾಮಿನಿ ಚಲನಚಿತ್ರದ ಪೋಸ್ಟರ್ ಪ್ರದರ್ಶನ ಮಾಡಿ, ಬಳಿಕ ಸುದ್ಧಿಗೋಷ್ಠಿ ಮಾತಾಡಿದ ಚಲನಚಿತ್ರದ ನಾಯಕ ನಟಿ ಸುಳ್ಯದ ದೊಡ್ಡತೋಟನಿವಾಸಿ ಶ್ರೇಯ ಅವರು ಬೆಳ್ತಂಗಡಿ ಮೂಲದ ಗುರುಪ್ರಕಾಶ್ ಅವರ ನಿರ್ದೇಶನ ಮತ್ತು ನಿರ್ಮಾಪಕತ್ವದಲ್ಲಿ ಮೂಡಿ ಬಂದಿರುವ ಒಳ್ಳೆಯ ಕಥೆಯನ್ನು ಹೊಂದಿರುವ ಚಲನಚಿತ್ರ ಇದಾಗಿದೆ. ಇದರಲ್ಲಿ ತಾಯಿಯ ಮಮತೆ, ಸುಂದರವಾದ ಪ್ರೇಮದ ಕಥೆ, ಒಳ್ಳೆಯ ಹಾಸ್ಯ ಪ್ರಜ್ಞೆ ಮತ್ತು ಆಕ್ಷನ್ ಸೀನ್ ಇರುವ ಎಮೋಷನಲ್ ಹಾರರ್ ಚಲನ ಚಿತವಾಗಿದೆ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಮಂಗಳೂರು ಭಾಗದ ೨೪ ಕಲಾವಿದರು ಹಾಗೂ ಮಡಿಕೇರಿಯ ಓರ್ವ ಕಲಾವಿದರು ಈ ಚಿತ್ರದಲ್ಲಿದ್ದಾರೆ ಎಂದು ತಿಳಿಸಿದರು.

ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಾದ ಬೆಳ್ತಂಗಡಿಯ ಗುರುಪ್ರಕಾಶ್ ಅವರು ಮಾತನಾಡಿ ತೀರಾ ಸಸ್ಪೆನ್ಸ್ ಮತ್ತು ಲವ್ ಸ್ಟೋರಿಯಾಗಿ ಮೂಡಿ ಬಂದಿರುವ ಈ ಚಿತ್ರವನ್ನು ಸುಮಾರು ೨೫ ದಿನದಲ್ಲಿ ಚಿತ್ರೀಕರಿಸಲಾಗಿದೆ. ಬೆಳ್ತಂಗಡಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದರಲ್ಲಿ ಮೂರು ಹಾಡುಗಳು ಮತ್ತು ಮೂರು ಪೈಟ್ ದೃಶ್ಯವಿದೆ. ಸುಳ್ಯ ಮತ್ತು ಪುತ್ತೂರಿನ ಭಾರತ್ ಸಿನಿಮಾಸ್‌ನಲ್ಲಿ ಅ. ೩೦ರಂದು ಸಂಜೆ ೫ ಗಂಟೆಗೆ ಚಲನಚಿತ್ರ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು.

ಸುದ್ಧಿಗೋಷ್ಠಿಯಲ್ಲಿ ಚಲನಚಿತ್ರದ ನಾಯಕ ನಟ ಮಡಿಕೇರಿಯ ಅಂಜನ್ ತಮ್ಮಯ್ಯ, ನಟರಾದ ರಾಜೀವ್ ಬಿ.ಎಚ್, ಉಷಾ ಲಕ್ಷ್ಮಣ ಪೂಜಾರಿ ಬೆಳ್ಳಿಪ್ಪಾಡಿ, ಗಣೇಶ್ ಪೂಜಾರಿ ಅಲಂಗ, ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು.

Share This Article
Leave a Comment