ರಾಜ್ಯೋತ್ಸವ ಆಚರಣೆಯಲ್ಲಿ ರಾಜಿ ಇಲ್ಲ ಕರವೇ ಕಾರ್ಯದರ್ಶಿ, ಯುವ ನಾಯಕ ಮೌಶಿರ್ ಅಹ್ಮದ್ ಸಾಮಣಿಗೆ

Prakhara News
1 Min Read

ಉಳ್ಳಾಲ: ನವೆಂಬರ್ 1 ಕನ್ನಡ ರಾಜ್ಯೋತ್ಸವವು ಕೇವಲ ಒಂದು ದಿನವಲ್ಲ, ಅದು ಕನ್ನಡಿಗರ ಹೆಮ್ಮೆ, ಸ್ವಾಭಿಮಾನ, ನಾಡಿನ ಸಂಸ್ಕೃತಿ, ಭಾಷೆ, ನೆಲ, ಜಲದ ಪ್ರತೀಕವಾಗಿದೆ. ಕರ್ನಾಟಕ ಏಕೀಕರಣದ ಹೋರಾಟದ ಫಲವಾಗಿ ಉದಯವಾದ ಈ ದಿನವನ್ನು ರಾಜ್ಯಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಬೇಕು.

ಈ ಬಾರಿ ನವೆಂಬರ್ 1 ಭಾನುವಾರ ಬಂದಿರುವುದರಿಂದ ಕೆಲವು ಶಾಲಾ-ಕಾಲೇಜುಗಳು ಮತ್ತು ಕಚೇರಿಗಳು ರಜೆ ನೆಪದಲ್ಲಿ ಕಾರ್ಯಕ್ರಮ ನಡೆಸದೇ ಇರಬಾರದು. ಭಾನುವಾರವಾದರೂ ಕನ್ನಡ ಬಾವುಟ ಹಾರಿಸಿ, ನಾಡಗೀತೆ ಹಾಡಿ, ಕನ್ನಡದ ಹಿರಿಮೆಯನ್ನು ಸಾರುವ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಆಚರಿಸಬೇಕು ಎಂದು ಈ ಮೂಲಕ ಎಲ್ಲಾ ಶಾಲಾ-ಕಾಲೇಜುಗಳ ಮುಖ್ಯಸ್ಥರಿಗೆ, ಆಡಳಿತ ಮಂಡಳಿಗಳಿಗೆ ಮನವಿ ಮಾಡುತ್ತೇನೆ.

ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಬ್ಯಾಂಕುಗಳು, ಸಂಘ-ಸಂಸ್ಥೆಗಳು ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಕೋರುತ್ತೇನೆ. ಕನ್ನಡ ಬಾವುಟ ಹಾರಿಸಿ, ಕನ್ನಡದಲ್ಲಿ ನಾಮಫಲಕ ಅಳವಡಿಸಿ, ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಸಂಕಲ್ಪ ಮಾಡಬೇಕು.

ಕರವೇ ವತಿಯಿಂದ ಜಿಲ್ಲೆಯಾದ್ಯಂತ ಕಾರ್ಯಕ್ರಮ:
ಈ ಬಾರಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ , ಮಂಗಳೂರು ಸೇರಿದಂತೆ ತೊಕ್ಕೊಟ್ಟು, ನಾಟೆಕಲ್, , ಬಂಟ್ವಾಳ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕನ್ನಡ ಬಾವುಟ ಹಾರಾಟ, ಪ್ರತಿಭಾ ಪುರಸ್ಕಾರ ಮತ್ತು ಕನ್ನಡ ಕಾಜ್ಯೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ಮೌಸೀರ್ ಅಹಮದ್ ಸಾಮಣಿಗೆ ಪತ್ರೀಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment