ನನಗಾಗಿ ವಿಧವೆಯಂತೆ ಬದುಕುವುದು ಇಷ್ಟವಿಲ್ಲ: ತಿಹಾರ್‌ ಜೈಲಿಂದಲೇ ಪಾಕ್ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಯಾಸಿನ್ ಮಲಿಕ್..!

Prakhara News
1 Min Read

ನವದೆಹಲಿ: ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪ್ರತ್ಯೇಕತಾವಾದಿ ನಾಯಕ ಮತ್ತು ನಿಷೇಧಿತ ಉಗ್ರ ಸಂಘಟನೆಯಾದ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥ ಯಾಸಿನ್ ಮಲಿಕ್ ತನ್ನ ಪಾಕಿಸ್ತಾನದ ಪತ್ನಿ ಮುಷಾಲ್ ಹುಸೇನ್ ಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾನೆ.

1990ರ ಸರಳಾ ಭಟ್ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಯಾಸಿನ್ ಮಲಿಕ್ ತನ್ನ ಶಿಕ್ಷೆಯನ್ನು ಪ್ರಶ್ನಿಸುವುದಿಲ್ಲ ಎಂದು ಹೇಳಿದ್ದಾರೆ.

2019 ರಿಂದ ತಿಹಾರ್‌ನಲ್ಲಿರುವ ಮಲಿಕ್, ಬುಧವಾರ ತಮ್ಮ ವಕೀಲ ಅಬು ಆದಿಲ್ ಪಂಡಿತ್ ಮೂಲಕ ಶ್ರೀನಗರದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ 25 ಪುಟಗಳ ಅಫಿಡವಿಟ್‌ ಸಲ್ಲಿಸಿದ್ದು, ಅದರಲ್ಲಿ ಪತ್ನಿಗೆ ವಿಚ್ಛೇದನ ನೀಡುವ ವಿಷಯವನ್ನು ತಿಳಿಸಿದ್ದಾನೆ.

ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಭಟ್ ಕೊಲೆ ಪ್ರಕರಣದಲ್ಲಿ ತನಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಲು ಬಯಸುವುದಿಲ್ಲ ಎಂದು ಮಲಿಕ್ ಹೇಳಿದ್ದಾನೆ. ಆದಾಗ್ಯೂ, ತನ್ನ ಈ ನಿರ್ಧಾರವನ್ನು ತಪ್ಪೊಪ್ಪಿಗೆ ಎಂದು ಅರ್ಥೈಸಿಕೊಳ್ಳಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ನನಗಾಗಿ ವಿಧವೆಯಂತೆ ಬದುಕುವುದು ಇಷ್ಟವಿಲ್ಲ
ಕಳೆದ 8 ವರ್ಷಗಳಿಂದ ಮುಷಾಲ್ ಜೊತೆ ಮಾತನಾಡಿಲ್ಲ ಮತ್ತು ಫೋನ್ ಕಾಲ್‌, ವಿಡಿಯೋ ಕಾಲ್‌ನಲ್ಲಿಯೂ ಸಹ ಆಕೆಯೊಂದಿಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ಮಲಿಕ್ ಅಫಿಡವಿಟ್‌ನಲ್ಲಿ ತಿಳಿಸಿದ್ದಾನೆ.

ನನ್ನನ್ನು ಮದುವೆಯಾಗಿದ್ದರೂ ಒಂಟಿಯಾಗಿ ಜೀವನ ನಡೆಸುತ್ತಿರುವ ಮುಷಾಲ್‌ಳನ್ನು ನನ್ನ ಅನಿಶ್ಚಿತತೆಯ ಜೀವನದಿಂದ ಮುಕ್ತಗೊಳಿಸಲು ಈ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಮಲಿಕ್ ಸ್ಪಷ್ಟಪಡಿಸಿದ್ದಾನೆ.

ವಿಚ್ಛೇದನ ಕೋರಲು ಕಾರಣವನ್ನು ವಿವರಿಸಿದ ಯಾಸಿನ್ ಮಲಿಕ್. ಆಕೆ ಮದುವೆಯಾಗಿದ್ದರೂ ನನಗಾಗಿ ವಿಧವೆಯಂತೆ ಬದುಕುತ್ತಿರುವುದು ನನಗೆ ಇಷ್ಟವಿಲ್ಲ. ಇನ್ನಾದರೂ ಮುಷಾಲ್‌ ತನ್ನ ಮೇಲಿನ ಹೊರೆಯನ್ನು ಇಳಿಸಿಕೊಂಡು ಹೊಸದಾಗಿ ಸುಂದರ ಜೀವನ ಪ್ರಾರಂಭಿಸಬೇಕೆಂದು ನಾನು ಬಯಸುತ್ತೇನೆ. ಮುಷಾಲ್‌ ನನಗಿಂತ 20 ವರ್ಷ ಚಿಕ್ಕವಳು. ಅವಳಿಗಿನ್ನೂ ಹೊಸ ಬದುಕು ರೂಪಿಸಿಕೊಳ್ಳಲು ಅವಕಾಶವಿದೆ. ಆದ್ದರಿಂದ ನನ್ನನ್ನು ಮರೆತು ಹೊಸ ಹೆಜ್ಜೆ ಹಾಕಲು ಮುಂದಾಗು ಎಂದು ವಿನಂತಿಸಿಕೊಂಡಿದ್ದಾನೆ.

Share This Article
Leave a Comment