ನ್ಯೂ ಫ್ರೆಂಡ್ಸ್ ಕಾಪಿಗುಡ್ಡದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

Prakhara News
1 Min Read

ಮಂಗಳೂರು: ನ್ಯೂ ಫ್ರೆಂಡ್ಸ್ ಕಾಪಿಗುಡ್ಡ (ರಿ.) ಇದರ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಕಾಶ ಭವನ, ಕಾವೂರಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಸ್ಥಳೀಯ ಜನಪ್ರತಿನಿಧಿ ದೀಪಕ್ ಕೆ. ಪೂಜಾರಿ ಅವರು ಧ್ವಜಾರೋಹಣ ನೆರವೇರಿಸಿದರು. ಕ್ಲಬ್‌ನ ಅಧ್ಯಕ್ಷರಾದ ದಿನೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಘದ ಪ್ರಮುಖರಾದ ಸುದೇಶ್ ನಾಯಕ, ಚಂದ್ರಹಾಸ, ಸತೀಶ್ ದೇವಾಡಿಗ ಹಾಗೂ ಜಗದೀಶ್ ಕುಲಾಲ್ ಸೇರಿದಂತೆ ಶ್ರೀಮತಿ ಪ್ರೇಮ, ಶ್ರೀಮತಿ ಸೀಮಾ, ಶ್ರೀಮತಿ ದಿವ್ಯ, ಶ್ರೀಮತಿ ಧನ್ವಂತಿ ಹಾಗೂ ಶ್ರೀಮತಿ ಶ್ವೇತಾ ಉಪಸ್ಥಿತರಿದ್ದರು.

ಕಾಪಿಗುಡ್ಡ ಅಂಗನವಾಡಿಯ ಮಕ್ಕಳು, ಶಿಕ್ಷಕಿ ಶ್ರೀಮತಿ ದೇವಕಿ ಹಾಗೂ ಸಹಾಯಕಿ ಜಯಲಕ್ಷ್ಮೀ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮ ಹೆಚ್ಚಿಸಿದರು.

ಕಸ್ವಿ ಹಸಿರು ದಿಬ್ಬಣ ಇದರ ಪ್ರಮುಖರಾದ ಕೇಶವ ರಾಮಕುಂಜ ಹಾಗೂ ಹಿರಿಯರಾದ ಸುಶೀಲಗಟ್ಟಿ, ಚೆನ್ನಪ್ಪ ಅಮೀನ್, ಕಮಲಾಕ್ಷ ಶೆಟ್ಟಿ, ಅಶೋಕ, ಶ್ರೀಮತಿ ರಮಣಿಭಾರತಿ, ಶ್ರೀಮತಿ ವಸಂತ, ಸರೋಜ ಹಾಗೂ ಧನಸ್ಸು ಸೇರಿದಂತೆ ಸ್ಥಳೀಯ ನಾಗರಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕ್ಲಬ್‌ನ ಸ್ಥಾಪಕ ಸದಸ್ಯರಾದ ರಾಜೇಶ್ ದೇವಾಡಿಗ ಅವರು ಸ್ವಾಗತಿಸಿದರು. ಕಾರ್ಯಕ್ರಮದ ಕಾರ್ಯದರ್ಶಿ ಉಷಾ ಚಂದ್ರಹಾಸ ಅವರು ವಂದಿಸಿದರು.
ದೇಶಭಕ್ತಿ, ಒಗ್ಗಟ್ಟು ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶ ಸಾರಿದ ಈ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.

Share This Article
Leave a Comment