
ಉಡುಪಿ: ವ್ಯೋಮ್ ಡ್ಯಾನ್ಸ್ ಅಕಾಡೆಮಿ ಇದರ ಸ್ಥಳಾಂತರಗೊಂಡ ನೃತ್ಯ ತರಗತಿಯು ಬ್ರಹ್ಮಗಿರಿಯಲ್ಲಿ ಇತ್ತೀಚೆಗೆ ಪ್ರಾರಂಭಗೊಂಡಿತು.



ಉದ್ಯಮಿಗಳಾದ ಕೆ. ಕೃಷ್ಣಮೂರ್ತಿ ಆಚಾರ್ಯ ಇವರು ಸಂಸ್ಥೆಯನ್ನು ಉಧ್ಘಾಟಿಸಿ ಮಾತನಾಡುತ್ತಾ ಈ ಅಕಾಡೆಮಿಯು ಇತ್ತೀಚಿನ ದಿನಗಳಲ್ಲಿ ಉತ್ತಮ ಹೆಸರನ್ನು ಗಳಿಸುತ್ತಿದ್ದು ಇದರ ಪ್ರಮುಖರಾದ ಅವಿನಾಶ್ ಇವರು ಇತ್ತೀಚೆಗೆ ಕನ್ನಡ ಹಾಗೂ ತುಳು ಚಿತ್ರರಂಗಕ್ಕೂ ಕೋರಿಯೋಗ್ರಫಿಯನ್ನು ಮಾಡುತ್ತಿದ್ದು ಹೆಸರಾಂತ ಕಲಾವಿದರುಗಳಿಗೆ ತರಬೇತಿಯನ್ನು ಕೂಡಾ ನೀಡುತ್ತಿದ್ದು ಇದು ನಮ್ಮ ಕೃಷ್ಣನೂರಿಗೆ ಹೆಮ್ಮೆ ಎಂದು ತಿಳಿಸಿದರು.


ಈ ಸಂದರ್ಭ ಮುಖ್ಯ ಅತಿಥಿಯಾದ ಖ್ಯಾತ ನಟ ಪೃಥ್ವಿ ಅಂಬರ್ ಮಾತನಾಡಿ ನನ್ನ ಗೆಳೆಯ ಅವಿನಾಶ್ ಸಾಧನೆಗೆ ನಾನು ಎಂದಿಗೂ ಅವನೊಂದಿಗೆ ಇದ್ದೇ ಇರುತ್ತೇನೆ ಅವನ ಸಾಧನೆ ಇನ್ನಷ್ಟು ಉತ್ತುಂಗಕ್ಕೇರಲಿ ಅದರಿಂದಾಗಿ ವ್ಯೋಮ್ ಅಕಾಡೆಮಿ ಇನ್ನಷ್ಟು ಎತ್ತರಕ್ಕೇರಲಿ ಎಂದು ಹಾರೈಸಿದರು.
ಶಟರ್ ಬಾಕ್ಸ್ ಚಾನೆಲ್ ನ ಸಚಿನ್ ಎಸ್. ಶೆಟ್ಟಿ, ಇಂಜಿನೀಯರ್ ಮಿಥುನ್ ಪಿ. ಶೆಟ್ಟಿ, ನಿವೃತ್ತ ಪೋಲೀಸ್ ಅಧಿಕಾರಿಗಳಾದ ನಾರಾಯಣ ಇವರುಗಳು ಸಂಸ್ಥೆಯ ಉತ್ತುಂಗಕ್ಕೆ ಶುಭ ಹಾರೈಸಿದರು.
ಈ ಸಂದರ್ಭ ಸಂಸ್ಥೆಯ ಮುಖ್ಯಸ್ಥರಾದ ಅವಿನಾಶ್ ಹಾಗೂ ಸಂಸ್ಥೆಯ ಕಲಾವಿದರು, ಹಿತೈಷಿಗಳು ಉಪಸ್ಥಿತರಿದ್ದರು.