
ಬಂಟ್ವಾಳ: ನಾಪತ್ತೆಯಾಗಿರುವ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್ ಶೋಧಕ್ಕೆ ಇಂದು (ಮಾ.8) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ನೇತೃತ್ವದ ಜಿಲ್ಲಾ ಪೊಲೀಸ್ ತಂಡ ನಾಪತ್ತೆ ನಡೆದ ಸ್ಥಳದಲ್ಲಿ 7 ಗಂಟೆಯಿಂದ ಕೂಂಬಿಂಗ್ ಕಾರ್ಯಚರಣೆ ಮಾಡುತ್ತಿದ್ದಾರೆ.



ಕಳೆದ 12 ದಿನಗಳಿಂದ ದಿಗಂತ್ ಪತ್ತೆಗೆ ಪೊಲೀಸರು ಹರ ಸಾಹಸ ಪಟ್ಟು ವಿವಿಧ ರೀತಿಯ ಕಾರ್ಯಾಚರಣೆ ಮಾಡುತ್ತಿದ್ದರೂ ಪತ್ತೆ ಮಾಡುವಲ್ಲಿ ಯಶಸ್ವಿಯಾಗಲಿಲ್ಲ. 40ಕ್ಕೂ ಅಧಿಕ ಪೊಲೀಸರ ತಂಡ ಕೆಲಸ ಮಾಡುತ್ತಿದೆ. ಇಂದು ಎಸ್.ಪಿ. ಹುಡುಕಾಟದ ಕಾರ್ಯ ನಡೆಯುತ್ತಿದೆ.


ಕೂಬಿಂಗ್ ಕಾರ್ಯದಲ್ಲಿ ಬಂಟ್ವಾಳ ಸಬ್ ಡಿವಿಜನ್ನ 9 ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗಳು ಎಸ್.ಐ ಗಳು, 100 ಕ್ಕೂ ಅಧಿಕ ಪೊಲೀಸರ ತಂಡ ತೊಡಗಿದೆ. ನೇತ್ರಾವತಿ ನದಿ ಭಾಗದ ಸುತ್ತಲಿನ ಭಾಗದಲ್ಲಿ ದೋಣಿ ಬಳಸಿ ನದಿಯಲ್ಲಿ ಕೂಡಾ ಶೋಧ ಕಾರ್ಯ ಮುಂದುವರಿದಿದೆ.