Home ತಾಜಾ ಸುದ್ದಿ ಅರ್ಜಿದಾರರ ಮನೆ ಬಾಗಿಲಿಗೆ ಬರಲಿದೆ DL, RC Smart Card: ರಾಜ್ಯ ಸರ್ಕಾರದಿಂದ ತೀರ್ಮಾನ

ಅರ್ಜಿದಾರರ ಮನೆ ಬಾಗಿಲಿಗೆ ಬರಲಿದೆ DL, RC Smart Card: ರಾಜ್ಯ ಸರ್ಕಾರದಿಂದ ತೀರ್ಮಾನ

0

ಬೆಂಗಳೂರು: ಇನ್ನುಂದ ವಾಹನ ಚಾಲನಾ ಅನುಜ್ಞಾ ಪತ್ರ (ಡಿಎಲ್), ವಾಹನ ನೋಂದಣಿ ಪ್ರಮಾಣಪತ್ರ (ಆರ್ ಸಿ) ಸ್ಟಾರ್ಟ್‌ ಕಾರ್ಡ್‌ಗಳು ಅರ್ಜಿದಾರರ ಮನೆಬಾಗಿಲಿಗೆ ತಲುಪಿಸುವುದಕ್ಕೆ ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಾರಿಗೆ ಇಲಾಖೆ ಸಚಿವ ಆರ್‌ ರಾಮಲಿಂಗರೆಡ್ಡಿಯವರು ಈ ಸಂಬಂಧ ಸಾರಿಗೆ ಇಲಾಖೆ ಮತ್ತು ಅಂಚೆ ಇಲಾಖೆ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದ್ದು, ಇದಕ್ಕೆ ಸರಕಾರ ಶುಕ್ರವಾರ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ


ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ನಿತ್ಯ ಮುದ್ರಿತವಾಗುವ ಡೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಪ್ರಮಾಣಪತ್ರ ಸ್ಟಾರ್ಟ್ ಕಾರ್ಡ್‌ಗಳನ್ನು ಸೂಚನಾ ಪತ್ರದೊಂದಿಗೆ ಲಗತ್ತಿಸಿ ಸ್ಪೀಡ್‌ ಪೋಸ್ಟ್ ಮೂಲಕ ಅರ್ಜಿದಾರರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ, ಸಾರಿಗೆ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಮ್ಮುಖದಲ್ಲಿ ಸಾರಿಗೆ ಮತ್ತು ಅಂಚೆ ಇಲಾಖೆ ಅಧಿಕಾರಿಗಳು ಈ ಸಂಬಂಧದ ಒಡಂಬಡಿಕೆಗೆ ಸಹಿ ಹಾಕಿದರು. ಇದಲ್ಲದೇ ಸಾರ್ವಜನಿಕರು ಆನ್‌ ಲೈನ್ ಆನ್‌ಲೈನ್ ಮೂಲಕ ದಾಖಲಾತಿಗಳ ಮಾಹಿತಿ ವೀಕ್ಷಿಸಬಹುದಾಗಿದೆ.

LEAVE A REPLY

Please enter your comment!
Please enter your name here