Home ಕರಾವಳಿ ಸುಳ್ಯ: ಹಿಟ್ ಆ್ಯಂಡ್ ರನ್- ಇಬ್ಬರು ಬಲಿ

ಸುಳ್ಯ: ಹಿಟ್ ಆ್ಯಂಡ್ ರನ್- ಇಬ್ಬರು ಬಲಿ

0

ಸುಳ್ಯ ಸಮೀಪದ ಕನಕಮಜಲು ಬಳಿ ನಿನ್ನೆ ರಾತ್ರಿ ನಡೆದ ಹಿಟ್ ಅ್ಯಂಡ್ ರನ್ ಪ್ರಕರಣದಲ್ಲಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.

ನಿನ್ನೆ ರಾತ್ರಿ ಕನಕಮಜಲು ಶ್ರೀ ಆತ್ಮಾರಾಂ ಭಜನಾ ಮಂದಿರದಲ್ಲಿ ಏಕಾಹ ಭಜನೆ ನಡೆಯುತ್ತಿದ್ದು, ಇದರಲ್ಲಿ ಪಾಲ್ಗೊಳ್ಳಲು ಬರುತ್ತಿದ್ದವರು ಗಾಯಗೊಂಡಿದ್ದ ಇಬ್ಬರುನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಇಬ್ಬರೂ ನಡೆದುಕೊಂಡು ಬರುತ್ತಿದ್ದ ವೇಳೆ ವೇಗವಾಗಿ ಬಂದ ಕಾರೋಂದು ಇಬ್ಬರಿಗೂ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ ಎನ್ನಲಾಗಿದೆ. ಜನಾರ್ಧನ ಶೆಟ್ಟಿ ಹಾಗೂ ರಾಮಯ್ಯ ಶೆಟ್ಟಿ ಎಂಬವರು ಮೃತ ದುರ್ಧೈವಿಗಳಾಗಿದ್ದು ಇವರು ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ನಿವಾಸಿಗಳು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ರಸ್ತೆಯ ಬದಿಯಲ್ಲಿ ಬಿದ್ದಿದ್ದ ರಾಮ ಶೆಟ್ಟಿ ಅವರನ್ನು ಮೊದಲು ಗಮನಿಸಿ ಜನರು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಸ್ವಲ್ಪ ಸಮಯದ ಬಳಿಕ ಜನಾರ್ಧನ ಶೆಟ್ಟಿ ಅವರೂ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿತ್ತು. ಇಬ್ಬರೂ ಗಂಭೀರ ಸ್ಥಿತಿಯಲ್ಲಿ ಇದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತ ಪಟ್ಟಿದ್ದಾರೆ. ಡಿಕ್ಕಿ ಹೊಡೆದ ಕಾರು ಯಾವುದು ಎನ್ನುವುದು ಇದುವರೆಗೂ ಪತ್ತೆಯಾಗಿಲ್ಲ ಆದ್ರೆ ಇಲ್ಲೇ ಜಾಲ್ಸೂರು ಸಮೀಪ ಚಕ್ ಪೋಸ್ಟ್ ಇದ್ದು ಅದರಲ್ಲಿ ಅಪಘಾತದ ಸಮಯದಲ್ಲಿ ಸಂಚರಿಸಿದ ವಾಹನದ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here