
ಹೊರನಾಡಾದ ಮುಂಬೈಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಬಳಿಕ ಕಾನೂನು ವಿಷಯಯಲ್ಲಿ ಅಪಾರವಾದ ಪರಿಣತಿ ಸಾಧಿಸಿ ಹೈಕೋರ್ಟ್, ಸುಪ್ರೀಂ ಕೋರ್ಟ್ಗಳ ನ್ಯಾಯಾಧೀಶರಾಗಿ, ನಾಡಿನ ಗಮನ ಸೆಳೆದ ವಿವಿಧ ಆಯೋಗಗಳ ಅಧ್ಯಕ್ಷರಾಗಿ,ಶ್ರೇಷ್ಠ ವಿದ್ವಾಂಸರಾಗಿ, ಅಪ್ರತಿಮ ವಾಗ್ಮಿಯಾಗಿ ದೇಶ ವಿದೇಶಗಳಲ್ಲಿ ಹೆಸರು ಮಾಡಿದ ಶ್ರೇಯಸ್ಸು ಮುಂಬೈ ಕನ್ನಡಿಗ ಜಸ್ಟಿಸ್ ಬಿ. ಎನ್. ಶ್ರೀಕೃಷ್ಣ ಅವರಿಗೆ ಸಲ್ಲುತ್ತದೆ.



ಅವರು ತಮ್ಮ ಮಾತು ಕೃತಿಗಳ ಮೂಲಕ ಅಂತಾರಾಷ್ಟೀಯ ಖ್ಯಾತಿಯನ್ನು ಪಡೆದ ಎತ್ತರದ ವ್ಯಕ್ತಿ.ಜ / ಶ್ರೀಕೃಷ್ಣ ಅವರ ಯಾಶೋಗಾಥೆ ಅಷ್ಟೇ ಅನುಪಮವಾದುದು. ನ್ಯಾಯಾಧೀಶ ಶ್ರೀಕೃಷ್ಣ ಅವರ ವ್ಯಕ್ತಿತ್ವ ಬಹು ಆಯಾಮವುಳ್ಳದ್ದು. ಅವರೊಬ್ಬ ಘನ ಕಾನೂನು ತಜ್ಞ, ಮಹಾನ್ ಚಿಂತಕ, ಜಿಜ್ಞಾಸು,ಗುಣಗ್ರಾಹಿ,ಅನ್ವೇಷಕ,ಬಹು ಭಾಷಾತಜ್ಞ, ಬಹುಶ್ರುತ ಕೋವಿದ, ನ್ಯಾಯಪಕ್ಷಪಾತಿ,ನೇರ ನಡೆನುಡಿಯ ಅಪೂರ್ವ ಚೇತನ. ಶ್ರೀಕೃಷ್ಣ ಅವರು ಬರೇ ನ್ಯಾಯಮೂರ್ತಿಯಲ್ಲ,ಜ್ಞಾನ ವಿಜ್ಞಾನ ಮೂರ್ತಿಯಾಗಿ ಸೈ ಎನಿಸಿಕೊಂಡ ಅಪರೂಪದ ಸಾಹಸ ಪುರುಷ.ಅವರ ಸಾಧನೆಯನ್ನು ಗಮನಿಸಿ ತಮಿಳುನಾಡಿನ ಸಾಯಿ ವಿಶ್ವವಿದ್ಯಾಲಯ ಅವರಿಗೆ ಗೌರವ ಡಿ. ಲಿಟ್ ಪದವಿಯನ್ನು ನೀಡಿ ಸತ್ಕರಿಸಿದೆ. ಇದು ಮುಂಬೈ ಕನ್ನಡಿಗರಿಗೆ ಹೆಮ್ಮೆಯ ಸಂಗತಿ.


ಅವರಿಗೆ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪರವಾಗಿ ಹಾರ್ದಿಕ ಅಭಿನಂದನೆಗಳು.