Home ಕರಾವಳಿ ಮಂಗಳೂರು: ಬಾಲಕಿಗೆ ಸ್ನ್ಯಾಪ್‌ ಚಾಟ್‌ನಲ್ಲಿ ಅಶ್ಲೀಲ ವೀಡಿಯೋ ಕಳಿಸಿ ಬೆದರಿಕೆ- ಪ್ರಕರಣ ದಾಖಲು

ಮಂಗಳೂರು: ಬಾಲಕಿಗೆ ಸ್ನ್ಯಾಪ್‌ ಚಾಟ್‌ನಲ್ಲಿ ಅಶ್ಲೀಲ ವೀಡಿಯೋ ಕಳಿಸಿ ಬೆದರಿಕೆ- ಪ್ರಕರಣ ದಾಖಲು

0

ಮಂಗಳೂರು: ಸ್ನ್ಯಾಪ್‌ಚಾಟ್‌ನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಅಶ್ಲೀಲ ವೀಡಿಯೋ ಫೈಲ್‌ ಕಳುಹಿಸಿ ಬೆದರಿಕೆ ಹಾಕಿದ್ದಾನೆ. ಬಾಲಕಿಯ ದೂರಿನ ಮೇರೆಗೆ ಬೆದರಿಕೆ ಹಾಕಿದವನ ವಿರುದ್ಧ ಮಂಗಳೂರಿನ ಸೆನ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತನ್ನ ಸ್ನ್ಯಾಪ್‌ಚಾಟ್‌ ಖಾತೆಗೆ ಓರ್ವ ವ್ಯಕ್ತಿ ಆತನ ಸ್ನ್ಯಾಪ್‌ಚಾಟ್‌ ಖಾತೆಯಿಂದ ಅಶ್ಲೀಲತೆಯ ವೀಡಿಯೋ ಕಾಲ್‌ನ ಸ್ಕ್ರೀನ್‌ ರೆಕಾರ್ಡ್‌ ಮಾಡಿರುವ ವೀಡಿಯೋ ಫೈಲ್‌ ಅನ್ನು ಕಳುಹಿಸಿ ಬೆದರಿಕೆ ಹಾಕಿದ್ದಾನೆ ಎಂದು ಅಪ್ರಾಪ್ತ ವಯಸ್ಸಿನ ಬಾಲಕಿ ನ್ಯಾಷನಲ್‌ ಸೈಬರ್‌ ಕ್ರೈಂ ರಿಪೋರ್ಟಿಂಗ್‌ ಪೋರ್ಟಲ್‌ಗೆ (ಎನ್‌ಸಿಸಿಆರ್‌ಪಿ) ದೂರು ನೀಡಿದ್ದಳು.ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here