Home ತಾಜಾ ಸುದ್ದಿ 10 ಲಕ್ಷಕ್ಕೆ ಗಂಡನ ಕಿಡ್ನಿ ಮಾರಿ ಪ್ರಿಯಕರನ ಜೊತೆ ಪತ್ನಿ ಪರಾರಿ..!!

10 ಲಕ್ಷಕ್ಕೆ ಗಂಡನ ಕಿಡ್ನಿ ಮಾರಿ ಪ್ರಿಯಕರನ ಜೊತೆ ಪತ್ನಿ ಪರಾರಿ..!!

0

ಕೋಲ್ಕತಾ: ಮಗಳ ವಿದ್ಯಾಭ್ಯಾಸಕ್ಕೆ ಹಣ ಸಾಕಾಗುತ್ತಿಲ್ಲ… ನಿನ್ನ ಕಿಡ್ನಿ ಮಾರು ಎಂದು ಒತ್ತಾಯಿಸುತ್ತಿದ್ದ ಮಹಿಳೆಯೊಬ್ಬಳು ಕಿಡ್ನಿ ಮಾರಿದ ಹಣ ಕೈಗೆ ಬರುತ್ತಲೇ ತನ್ನ ಫೇಸ್ ಬುಕ್ ಲವರ್ ಜೊತೆ ರಾತ್ರೋರಾತ್ರಿ ಪರಾರಿಯಾಗಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ.

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಚಾನ್‌ಕ್ರಿಲ್‌ನಲ್ಲಿ ಈ ಘಟನೆ ನಡೆದಿದ್ದು, ಬರೋಬ್ಬರಿ 10 ಲಕ್ಷಕ್ಕೆ ಕಿಡ್ನಿ ಮಾರಿದ ಪತಿ ಈಗ ತನ್ನ ಪತ್ನಿಯ ಕುಕೃತ್ಯದ ವಿರುದ್ಧ ಮನನೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಮೂಲಗಳ ಪ್ರಕಾರ ಸಂತ್ರಸ್ತ ವ್ಯಕ್ತಿ ವೃತ್ತಿಯಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ ಈತನಿಗೆ ಓರ್ವ ಮಗಳು ಕೂಡ ಇದ್ದಳು. ಮಗಳ ವಿದ್ಯಾಭ್ಯಾಸದ ವಿಚಾರ ಮುಂದಿಟ್ಟುಕೊಂಡು ಪತಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಮಹಿಳೆ, ನಿನ್ನ ಆದಾಯ ಸಾಲುತ್ತಿಲ್ಲ. ಮಗಳ ವಿದ್ಯಾಭ್ಯಾಸಕ್ಕೆ ಮತ್ತಷ್ಟು ಹಣ ಬೇಕು ಎಂದು ಒತ್ತಡ ಹೇರುತ್ತಿದ್ದಳು.

ಈಗ್ಗೇ ಕಿಡ್ನಿ ಮಾರಿದರೆ ಹಣ ಬರುತ್ತದೆ ಎಂಬ ವಿಚಾರ ಕೇಳಿ ತನ್ನ ಗಂಡನಿಗೆ ಕಿಡ್ನಿ ಮಾರುವಂತೆ ನಿತ್ಯ ಒತ್ತಡ ಹೇರುತ್ತಿದ್ದಳು. ಇವಳ ಹಿಂಸೆ ತಾಳಲಾರದೆ ಮತ್ತು ಮಗಳ ಭವಿಷ್ಯದ ನಿಟ್ಟಿನಲ್ಲಿ ಯೋಚಿಸಿ ಒಂದು ದಿನ ಗಂಡ ಕಿಡ್ನಿ ಮಾರುತ್ತೇನೆ ಎಂದು ಒಪ್ಪಿಕೊಂಡಿದ್ದ. ಬಳಿಕ ಒಂದು ತಿಂಗಳ ನಂತರ, ಒಂದು ಮೂತ್ರಪಿಂಡವನ್ನು 10 ಲಕ್ಷ ರೂ. ಗೆ ಮಾರಾಟ ಮಾಡಲಾಗಿತ್ತು. ಅದರಂತೆ ಸಂತ್ರಸ್ತ ವ್ಯಕ್ತಿಗೆ 10 ಲಕ್ಷ ರೂ ಹಣ ಕೂಡ ಸಂದಾಯವಾಗಿತ್ತು.

ಆದರೆ ಹಣ ಕೈ ಸೇರುತ್ತಿದ್ದಂತೆಯೇ ನಾಟಕ ಶುರು ಮಾಡಿಕೊಂಡಿದ್ದ ಕಿಲಾಡಿ ಹೆಂಡತಿ ಈ ಹಣವನ್ನು ಬೆಳಿಗ್ಗೆ ಬ್ಯಾಂಕಿಗೆ ಜಮಾ ಮಾಡುತ್ತೇನೆ ಎಂದು ಹೇಳಿ ತನ್ನ ಬಳಿ ಇರಿಸಿಕೊಂಡಿದ್ದಾಳೆ. ಬಳಿಕ ನಡು ರಾತ್ರಿ ಹಣದೊಂದಿಗೆ ಮನೆಬಿಟ್ಟು ತನ್ನ ಫೇಸ್ ಬುಕ್ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ.

ಪತ್ನಿ ನಾಪತ್ತೆಯಾಗಿ ಹಲವು ದಿನಗಳೇ ಕಳೆದರೂ ಆಕೆಯ ಬಗ್ಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ. ಆದರೆ ಇದೇ ಶುಕ್ರವಾರ, ತನ್ನ ಪತ್ನಿ ರವಿದಾಸ್ ಎಂಬ ವ್ಯಕ್ತಿಯೊಂದಿಗೆ ಬಾರೇಕ್‌ಪುರದ ಸುಭಾಷ್ ಕಾಲೋನಿಯಲ್ಲಿ ವಾಸಿಸುತ್ತಿರುವುದನ್ನು ತಿಳಿದ ಪತಿ ತಮ್ಮ ಕುಟುಂಬದೊಂದಿಗೆ ಅಲ್ಲಿಗೆ ಹೋಗಿದ್ದಾನೆ. ಆದರೆ ಅಲ್ಲಿ ಪತಿ ನೋಡಿ ಆಕ್ರೋಶಗೊಂಡ ಪಾಪಿ ಪತ್ನಿ, ಹೈಡ್ರಾಮಾ ಮಾಡಿದ್ದಾಳೆ.

ಆಕೆಯ ಮಾವ, ಅತ್ತೆ, ಗಂಡ ಮತ್ತು ಮಕ್ಕಳು ಎಷ್ಟೇ ಬೇಡಿಕೊಂಡರೂ, ಆಕೆ ಮಾತ್ರ ಯಾರಮನವೊಲಿಕೆಗೂ ಬಗ್ಗದೇ ತನ್ನ ಲವರ್ ಜೊತೆಯೇ ಇರುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ನಿನಗೆ ವಿಚ್ಛೇದನ ಕೊಡುವುದಾಗಿ ಗಂಡನಿಗೆ ಬೆದರಿಕೆ ಹಾಕಿ ಥಳಿಸಿದ್ದಾಳೆ. ಪತ್ನಿಯ ಈ ಮೃಗೀಯ ವರ್ತನೆ ಕಂಡು ಆಘಾತಗೊಂಡಿರುವ ವ್ಯಕ್ತಿ ಇದೀಗ ಪತಿ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಅಂದಹಾಗೆ 1994ರಿಂದ ಭಾರತದಲ್ಲಿ ಮಾನವ ಅಂಗಾಂಗಗಳ ಮಾರಾಟ ಕಾನೂನುಬಾಹಿರವಾಗಿದೆ. ಆದರೆ ದಾನಿಗಳ ಕೊರತೆಯಿಂದಾಗಿ ಅಂಗಾಂಗ ಮಾರಾಟ ದಂಧೆ ಮುಂದುವರೆದಿದೆ ಎಂದು ವೈದ್ಯರು ಹೇಳಿದ್ದಾರೆ.

LEAVE A REPLY

Please enter your comment!
Please enter your name here