ಬೆಳ್ತಂಗಡಿ : 12 ಜನರ ತಂಡವೊಂದು ಚಾರ್ಮಾಡಿಯ ಮುಹಿದ್ದಿನ್ ಜುಮ್ಮಾ ಮಸೀದಿಗೆ ನುಗ್ಗಿ ಧರ್ಮಗುರುವಿನ ಮೇಲೆ ಹಲ್ಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಧರ್ಮಗುರು ಶಮೀರ್ ಮುಸ್ಲಿಯಾರ್ (37) ಅವರ ಮೇಲೆ ತಂಡ ಹಲ್ಲೆ ನಡೆಸಿದ್ದು, ಗಾಯಗೊಂಡ ಧರ್ಮಗುರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳೀಯರಾದ ಬದ್ರುದ್ದಿನ್, ಸಂಶುದ್ದಿನ್, ಅಹಮದ್ ಟಿಬಿ ರೋಡ್, ನೌಫಲ್, ಅನ್ಸರ್, ಮುನೀರ್ ಅಸೀಫ್, ಅಫೀಝ್, ಅಫ್ರೀಜ್, ಶರೀಫ್, ಅಬ್ದುಲ್ ಖಾದರ್ ಮತ್ತಿತರರು ಮಸೀದಿಗೆ ನುಗ್ಗಿ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.