Home ಕರಾವಳಿ ಮಂಗಳೂರು: ನ್ಯಾಶನಲ್ ಸ್ಕೂಲ್ ಗೇಮ್ಸ್ ಅಥ್ಲೆಟಿಕ್ಸ್‌ನಲ್ಲಿ ಆಯುಷ್ ಪ್ರಾಂಜಲ್‌ಗೆ ಬೆಳ್ಳಿ

ಮಂಗಳೂರು: ನ್ಯಾಶನಲ್ ಸ್ಕೂಲ್ ಗೇಮ್ಸ್ ಅಥ್ಲೆಟಿಕ್ಸ್‌ನಲ್ಲಿ ಆಯುಷ್ ಪ್ರಾಂಜಲ್‌ಗೆ ಬೆಳ್ಳಿ

0

ಮಂಗಳೂರು : ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಲಕ್ನೋದಲ್ಲಿ ಜರಗಿದ 68ನೇ ನ್ಯಾಶನಲ್ ಸ್ಕೂಲ್ ಗೇಮ್ಸ್ ಅಥ್ಲೆಟಿಕ್ಸ್‌ನ 17 ವಯೋಮಿತಿಯ ವಿಭಾಗದ 200 ಮೀ.ಓಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಮಂಗಳೂರಿನ ಆಯುಷ್ ಪ್ರಾಂಜಲ್ 22.34 ಸೆಕೆಂಡ್ಸ್‌ನಲ್ಲಿ ಗುರಿ ಮುಟ್ಟುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ.


ಸ್ಪರ್ಧೆಯ ಸೆಮಿ ಫೈನಲ್‌ನಲ್ಲಿ 22.14 ಸೆಕೆಂಡ್ಸ್‌ನಲ್ಲಿ ಗುರಿ ಮುಟ್ಟುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದ 15ರ ಹರೆಯದ ಆಯುಷ್ ಪ್ರಾಂಜಲ್ ಮಂಗಳೂರಿನ ಖೇಲೋ ಇಂಡಿಯಾ ಅಥ್ಲೆಟಿಕ್ಸ್ ಸೆಂಟರ್‌ನಲ್ಲಿ ಕೋಚ್ ಭಕ್ಷಿತ್ ಸಾಲ್ಯಾನ್‌ರಿಂದ ತರಬೇತಿ ಪಡೆದಿದ್ದರು.

LEAVE A REPLY

Please enter your comment!
Please enter your name here