Home ಕರಾವಳಿ ಮಂಗಳಾದೇವಿ ನವರಾತ್ರಿ ಉತ್ಸವದಲ್ಲಿ 3 ಮಹಿಳೆಯರ ಚಿನ್ನ ಎಗರಿಸಿದ ಖದೀಮರು : ಪ್ರಕರಣ ದಾಖಲು

ಮಂಗಳಾದೇವಿ ನವರಾತ್ರಿ ಉತ್ಸವದಲ್ಲಿ 3 ಮಹಿಳೆಯರ ಚಿನ್ನ ಎಗರಿಸಿದ ಖದೀಮರು : ಪ್ರಕರಣ ದಾಖಲು

0
ಮಂಗಳೂರು : ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೆ ಹೋಗಿದ್ದ ಮೂವರು ಮಹಿಳೆಯರ ಚಿನ್ನದ ಸರ ಕಳವಾದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಉತ್ಸವದ ಪ್ರಯುಕ್ತ ನಡೆಯುವ ದೇವರ ದರ್ಶಕ್ಕೆ ಅ.11ರಂದು ಹೋದ ವೇಳೆ ಲೀಲಾ ಎಂಬವರ ಕುತ್ತಿಗೆಯಲ್ಲಿದ್ದ 6 ಪವನು ತೂಕದ ಸರವನ್ನು ಕಳವುಗೈಯಲಾಗಿದೆ.
ಅದೇ ವೇಳೆ ಕಮಲಾಕ್ಷಿ ಎಂಬವರ 3 ಪವನ್ ಮತ್ತು ಮೀನಾಕ್ಷಿ ಎಂಬವರ 4 ಪವನು ತೂಕದ ಚಿನ್ನದ ಸರ ಕೂಡಾ ಕಳವಾಗಿದೆ. ಇವುಗಳ ಒಟ್ಟು ಮೌಲ್ಯ 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಕುರಿತು ಸ್ಮಿತಾ ನೀಡಿದ ದೂರಿನಂತೆ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here