Home ಕರಾವಳಿ ನ.16 ರಂದು ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ” ಶಕ್ತಿ ಫೆಸ್ಟ್ ” : ಪ್ರೌಢಶಾಲೆ, ಪಿ.ಯು...

ನ.16 ರಂದು ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ” ಶಕ್ತಿ ಫೆಸ್ಟ್ ” : ಪ್ರೌಢಶಾಲೆ, ಪಿ.ಯು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

0

ಮಂಗಳೂರು:  ಶಕ್ತಿ ಶಿಕ್ಷಣ ಸಂಸ್ಥೆಯು 2018ರಲ್ಲಿ ಪ್ರಾರಂಭವಾಗಿರುವ ಶಿಕ್ಷಣ ಸಂಸ್ಥೆ. ಕಳೆದ 6 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆಗಿರುವ ಸಾಧನೆಯನ್ನು ಮಾಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ, ಸಂಸ್ಕಾರವನ್ನು ನಿರಂತರವಾಗಿ ಕೊಡುತ್ತಾ ಬರುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಭಾರತದ ಸಂಪತ್ತಾಗಭೇಕೆಂಬುವುದು ಸಂಸ್ಥೆಯ ಉದ್ದೇಶ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಲು “ಶಕ್ತಿ ಫೆಸ್ಟ್” ಎನ್ನುವ ವೇದಿಕೆಯಲ್ಲಿ ದಕ್ಷಿಣಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಶಾಲೆ ಮತ್ತು ಕಾಲೇಜಿನಲ್ಲಿ 8ನೇ ತರಗತಿಯಿಂದ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಕಲೆ, ಸಾಂಸ್ಕೃತಿಕ  ಪ್ರತಿಭೆಯನ್ನು ಗುರುತಿಸುವ ಕಾರ್ಯವನ್ನು ಮಾಡುತ್ತಿದೆ. ದಿನಾಂಕ ನವೆಂಬರ್  16ರಂದು ಶಕ್ತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಸುಮಾರು 14 ಸ್ಪರ್ಧೆಗಳನ್ನು ಆಯೋಜಿಸಿದೆ. ಇದರಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ನಗದು ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು. ಈ ಸ್ಪರ್ಧೆಗಳು ಈ ಕೆಳಗಿನಂತಿದೆ.


ಪಿಯುಸಿ ವಿದ್ಯಾರ್ಥಿಗಳಿಗೆ: 1. ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆ, 2. ಉತ್ಪನ್ನ ಬಿಡುಗಡೆ (ಶಾರ್ಕ್‍ಟ್ಯಾಂಕ್), 3. ರಂಗೋಲಿ – ವಿಷಯ: ನವರಾತ್ರಿ, 4. ಮುಖವರ್ಣಿಕೆ – ವಿಷಯ: ಡ್ರಗ್‍ ಅಬ್ಯುಸ್, 5. ಹೂಗುಚ್ಚ ತಯಾರಿ, 6. ರೀಲ್ ಮೇಕಿಂಗ್, 7. ಏಕ ವ್ಯಕ್ತಿ ಗಾಯನ – ಭಾವಗೀತೆ,

ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ:  1.  ಜನಪದ ಕುಣಿತ, 2. ಪೋಸ್ಟರ್ ಮೇಕಿಂಗ್ – ಥೀಮ್: ಸೈಬರ್ ಸೆಕ್ಯುರಿಟಿ, 3. ಪೆನ್ಸಿಲ್ ಸ್ಕೆಚ್, 4.  ವಿಜ್ಞಾನ ಮಾದರಿ – ಥೀಮ್: ಪರಿಸರ ಸ್ನೇಹಿ ನವ ಅವಿಷ್ಕಾರ, 5. ಬೀದಿ ನಾಟಕ ಸ್ಪರ್ಧೆ – ಥೀಮ್: ಸಾಮಾಜಿಕ ಕಳಕಳಿ, 6. ನಿಧಿ ಬೇಟೆ, 7.  ಏಕವ್ಯಕ್ತಿ ಗಾಯನ ಸ್ಪರ್ಧೆ, ವಿಷಯ: ಭಾವಗೀತೆ.

ಸಾಮಾನ್ಯ ನಿಯಮಗಳು:

1. ಸ್ಪರ್ಧೆಗಳನ್ನು ಪ್ರೌಢ ಶಾಲಾ ಹಾಗೂ ಪದವಿಪೂರ್ವಎರಡು ಹಂತಗಳಲ್ಲಿ ನಡೆಸಲಾಗುವುದು. 2. ಒಂದು ಶಾಲೆ/ಕಾಲೇಜಿನಿಂದ ಕೇವಲ ಒಂದು ತಂಡಕ್ಕೆ ಮಾತ್ರ ಅವಕಾಶ. 3. ಒಬ್ಬ ವಿದ್ಯಾರ್ಥಿಯು ತಲಾ ಎರಡು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ.  4. ಸ್ಪರ್ಧೆಯಲ್ಲಿ ತಂಡದ ಸದಸ್ಯರ ಗರಿಷ್ಠ ಮಿತಿ 25. 5. ಭಾಗವಹಿಸುವ ತಂಡವು ಕಾಲೇಜಿನ ಪ್ರಾಂಶುಪಾಲರು/ ಮುಖ್ಯೋಪಾಧ್ಯಾಯರ ಅನುಮತಿ (ಒಪ್ಪಿಗೆ) ಪತ್ರದೊಂದಿಗೆ ಹಾಜರಿರಬೇಕು. 6. ಸ್ಪರ್ಧೆಗೆ ಭಾಗವಹಿಸುವ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಹಾಗೂ ಶಾಲಾ ಐಡಿಯನ್ನು ಧರಿಸಿ 8.30 ಕ್ಕೆ ನೋಂದಾವಣೆ ಸ್ಥಳದಲ್ಲಿ ಹಾಜರಿರಬೇಕು. 7. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ತಲಾ 100 ರೂಪಾಯಿಯಂತೆ ನೋಂದಾವಣಿ ಶುಲ್ಕವನ್ನು ನಿಗದಿಪಡಿಸಲಾಗಿದೆ. 8. ವೈವಿಧ್ಯಮಯ ಸಾಂಸ್ಕøತಿಕ ಸ್ಪರ್ಧೆಗೆ ಹಾಜರಾಗುವ ತಂಡವು ತಮ್ಮ ಪೆನ್‍ಡ್ರೈವ್ ನ್ನು ತಮ್ಮ ಶಾಲೆ/ಕಾಲೇಜು ಹೆಸರಿನಲ್ಲಿ ಮರು ಹೊಂದಿಸಿ ಸ್ಪರ್ಧೆಯ ಉಸ್ತುವಾರಿ ವಹಿಸಿಕೊಂಡವರಿಗೆ ನೀಡತಕ್ಕದ್ದು. 9. ನೀರು, ಬೆಂಕಿ, ಪ್ರಾಣಿ ಹಾಗೂ ಸ್ಪೋಟಕ ವಸ್ತುಗಳ ಬಳಕೆ ನಿಷೇಧಿಸಲಾಗಿದೆ. 10. ಯಾವುದೇ ವ್ಯಕ್ತಿ, ಧರ್ಮ, ವರ್ಗ, ಸಮುದಾಯದ ಭಾವನೆಗೆ ಧಕ್ಕೆ ತರುವಂತಹ ಅವಹೇಳನಕಾರಿ ವಿಚಾರವನ್ನು ನಿಷೇಧಿಸಲಾಗಿದೆ. 11. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ. 12. ಸ್ಪರ್ಧೆಗೆ ಹೆಸರು ನೋಂದಾಯಿಸಲು ಕಡೆಯ ನವೆಂಬರ್ 11.  13. ಆಯೋಜಕರು ಸ್ಪರ್ಧೆಯ ಸಮಯ, ಕಾಲಾವಕಾಶವನ್ನು ಬದಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ.

ಈ ಪತ್ರಿಕಾಗೋಷ್ಠಿಯಲ್ಲಿ ಶಕ್ತಿ ಎಜ್ಯುಕೇಶನ್‍ ಟ್ರಸ್ಟ್‍ನ ಪ್ರಧಾನ ಸಲಹೆಗಾರರಾದ ರಮೇಶ ಕೆ.,ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಹೆಚ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ಬಬಿತಾ ಸೂರಜ್ ಮತ್ತು ಶಕ್ತಿ ಫೆಸ್ಟ್‍ನ ಸಂಯೋಜಕಿ ಸಬಿತ ಕಾಮತ್ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್––Shakthi.edu.in ಮತ್ತು ಇಮೇಲ್: fest@shakthi.edu.in ಸಂಪರ್ಕಿಸಲು ಕೋರಲಾಗಿದೆ. ಸಂಪರ್ಕಿಸುವ ವಿಳಾಸ: ಶಕ್ತಿ ಪದವಿ ಪೂರ್ವಕಾಲೇಜು, ಶ್ರೀ ಗೋಪಾಲಕೃಷ್ಣ ದೇವಸ್ಥಾನದ, ಶಕ್ತಿನಗರ, ಮಂಗಳೂರು – 575016

ಕಾವ್ಯ– 7975296917, ಸಬಿತ ಕಾಮತ್– 7259125021, ಹಂಸಲೇಖ – 9743702353

 

 

LEAVE A REPLY

Please enter your comment!
Please enter your name here