ಗಡಿನಾಡು ಕಾಸರಗೋಡಿನ ಸಾಂಸ್ಕೃತಿಕ- ಸಾಹಿತ್ಯ ವಲಯದ ಪ್ರಧಾನ ತಾಣವಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ,ಇದೇ ತಿಂಗಳ 14ನೇ ತಾರೀಕು ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಕೆ.ಎಂ.ಸಿ.ಆಸ್ಪತ್ರೆ ಅತ್ತಾವರ, ಮಂಗಳೂರು ಇವರ ನೇತೃತ್ವದಲ್ಲಿ, ಪ್ರತಿಷ್ಠಾನದ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಡಾಕ್ಟರ್ ಅರವಿಂದ ಎನ್. ಡಾಾಕ್ಟರ್ ಎನ್. ಬಿ. ಇವರ ನೇತೃತ್ವದಲ್ಲಿ ನಡೆಯುವ ಶಿಬಿರದಲ್ಲಿ ,ಎಲುಬು ಮತ್ತು ಕೀಲು ರೋಗ, ಸಾಮಾನ್ಯ ರೋಗ ವಿಭಾಗ, ಕಣ್ಣಿನ ವಿಭಾಗ, ಕಿವಿ ಮೂಗು ಮತ್ತು ಗಂಟಲು ವಿಭಾಗ, ಚರ್ಮರೋಗ ತಪಾಸಣೆ, ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ತಜ್ಞ ವೈದ್ಯರಿಂದ ನಡೆಯಲಿರುತ್ತದೆ. ಅಲ್ಲದೆ ಉಚಿತ ಬಿ.ಪಿ.,ಶುಗರ್ ತಪಾಸಣೆ, ಉಚಿತ ಔಷಧಗಳು ನಾಗರಿಕರಿಗೆ ಲಭ್ಯವಿರುತ್ತದೆ. ಫಲಾನುಭವಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಬಿದ್ದಲ್ಲಿ ಕೆ.ಎಂ.ಸಿ.ಆಸ್ಪತ್ರೆಯ ಹಸಿರು ಕಾರ್ಡು ನೀಡಲಾಗುವುದು. ಒಂದು ತಿಂಗಳ ಮಾನ್ಯತೆ ಹೊಂದಿರುವ ಈ ಕಾರ್ಡ್ ಮುಖಾಂತರ ಫಲಾನುಭವಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು ಎಂದು ಪ್ರತಿಷ್ಠಾನವು ಪ್ರಕಟಣೆ ಮೂಲಕ ವಿನಂತಿಸಿದೆ. ಅಲ್ಲದೆ ಕಾಸರಗೋಡಿನ ಹಿರಿಯ ವೈದ್ಯರು ಗಳು ಕಾರ್ಯಕ್ರಮ ಬಂದು ಸಲಹೆ ನೀಡಲಿದ್ದಾರೆ.


