ಪುತ್ತೂರು: ಶಿಕ್ಷಣ ಇಲಾಖೆಯಿಂದ ವಾಮಂಜೂರು ಎಸ್ ಡಿ ಎಂ ಪ್ರೌಢಶಾಲೆ ಯಲ್ಲಿ ನಡೆಸಲ್ಪಟ್ಟ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 14 ವರ್ಷದ ಒಳಗಿನ ಹೆಣ್ಣುಮಕ್ಕಳ ಸ್ಪರ್ಧೆಯಲ್ಲಿ ಕೆ.ಪಿ ಲಹರಿ ರೈ ಇವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇವರು ಜಯಪ್ರಸಾದ್ ರೈ ಮತ್ತು ಉಷಾ ಶೆಟ್ಟಿ ಕುತ್ಯಾಳ ಪಾದೆ ದಂಪತಿಯವರ ಪುತ್ರಿಯಾಗಿರುತ್ತಾರೆ. ನಾರಾಯಣ ಆಚಾರ್ಯ ಅಂಚಿನಡ್ಕ ಕರಾಟೆ ಗುರುಗಳ ಶಿಷ್ಯೆ ಆಗಿರುತ್ತಾರೆ. ವಿವೇಕಾನಂದ ತೆಂಕಿಲ ಪುತ್ತೂರು ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಯರಾಗಿದ್ದಾರೆ.