Home ಪ್ರಖರ ವಿಶೇಷ ಪವಿತ್ರ ಗಂಗಾ ನದಿ ಪುಷ್ಕರ ವಿಜಯೋತ್ಸವ

ಪವಿತ್ರ ಗಂಗಾ ನದಿ ಪುಷ್ಕರ ವಿಜಯೋತ್ಸವ

0
Pushkar's victory over the holy Ganga river



ಗಂಗಾವತಿ: ಅಖಿಲ ಕರ್ನಾಟಕ ಕಮ್ಮವಾರಿ ಸಂಘ (ರಿ) ಬೆಂಗಳೂರು ಇವರ ಆಶ್ರಯದಲ್ಲಿ ದಿನಾಂಕ: ೨೨.೦೪.೨೦೨೩ ರಿಂದ ೦೪.೦೫.೨೦೨೩ ರವರೆಗೆ ೧೩ ದಿನಗಳ ಕಾಲ ಉತ್ತರ ಪ್ರದೇಶದ ಕಾಶಿ ಅನ್ನಪೂರ್ಣ ದೇವಸ್ಥಾನದ ಆವರಣದಲ್ಲಿ ಪವಿತ್ರ ಗಂಗಾ ನದಿ ಪುಷ್ಕರ ಕಾರ್ಯಕ್ರಮವನ್ನು ಅದ್ಧೂರಿಯಿಂದ ನೆರವೇರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ೨೫೦೦೦ ಭಕ್ತರಿಗೆ ಅನ್ನದಾನ ಮಾಡಲಾಗಿದೆ. ಕರ್ನಾಟಕದ ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬೆಂಗಳೂರು, ಮೈಸೂರು ನಗರಗಳಿಂದ ಬಂದ ೩೦೦ ಜನ ಭಕ್ತಾಧಿಗಳಿಗೆ ೧೩ ದಿನಗಳ ಕಾಲ ಬೆಳಿಗ್ಗೆ ಉಪಾಹಾರ, ಮದ್ಯಾಹ್ನದ ಭೋಜನ ಹಾಗೂ ರಾತ್ರಿಯ ಭೋಜನ ಸೌಲಭ್ಯ ಕಲ್ಪಿಸುವುದರ ಜೊತೆಗೆ ವಸತಿ ಸೌಲಭ್ಯವನ್ನು ನೀಡಲಾಗಿತ್ತು. ರಾಯಚೂರು, ಗದಗ, ಬಳ್ಳಾರಿ, ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳಿಗೆ ಕಾಶಿ ಪ್ರವಾಸ ಕೈಗೊಳ್ಳಲು ಬಸ್ ಸೌಕರ್ಯವನ್ನು ಒದಗಿಸಲಾಗಿತ್ತು.
ದಿನಾಂಕ: ೧೯.೦೫.೨೦೨೩ ರಂದು ಸಿಂಧನೂರು ತಾಲೂಕಿನ ರಂಗಾಪುರಕ್ಯಾAಪ್ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಪವಿತ್ರ ಗಂಗಾ ನದಿ ಪುಷ್ಕರ ವಿಜಯೋತ್ಸವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಶಿ ವಿಶ್ವನಾಥಸ್ವಾಮಿಗೆ ಹಾಲಾಭಿಷೇಕ, ರುದ್ರಾಭಿಷೇಕ ಮತ್ತು ಕಾಶಿ ಅನ್ನಪೂಣೇಶ್ವರಿಗೆ ಕುಂಕುಮಾರ್ಚನೆ, ಗೋಪೂಜೆ, ಕಾಲಭೈರವನಿಗೆ ಪೂಜೆ ಮುಂತಾದ ಪೂಜೆಗಳನ್ನು ನೆರವೇರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ೨೦೦೦ ಕ್ಕೂ ಹೆಚ್ಚಿನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಗಿದೆ.
ವಿ.ಸೂ: ಪ್ರೀತಿಯ ಗೌರವ ಪತ್ರಕರ್ತರ ಮಿತ್ರ ಬಾಂಧವ್ಯರಲ್ಲಿ ವಿನಂತಿ.
ನಾಳೆ ದಿನಾಂಕ: ೦೩.೦೬.೨೦೨೩ ರಂದು ೧೦:೦೦ ಗಂಟೆಗೆ ನಿಮ್ಮೆಲ್ಲರಿಗೂ ಪವಿತ್ರ ಗಂಗಾಜಲ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಹೆಚ್ಚಿನ ವಿವರಗಳಿಗಾಗಿ ಜಿ. ರಾಮಕೃಷ್ಣ, ಮೊಬೈಲ್ ಸಂಖ್ಯೆ: ೯೪೪೮೨೨೮೭೩೮
ಸ್ಥಳ: ಶ್ರೀ ನೀಲಕಂಠೇಶ್ವರ ದೇವಸ್ಥಾನ, ಗಂಗಾವತಿ.


ಜಿ. ರಾಮಕೃಷ್ಣ
ಅಧ್ಯಕ್ಷರು,
ಅಖಿಲ ಕರ್ನಾಟಕ ಕಮ್ಮವಾರಿ ಸಂಘ (ರಿ), ಬೆಂಗಳೂರು.
ಮೊ.ನಂ: ೯೪೪೮೨೨೮೭೩೮

LEAVE A REPLY

Please enter your comment!
Please enter your name here