ವಿಟ್ಲ: ಶ್ರೀ ದುರ್ಗಾ ಕಲಾ ತಂಡದ ಪುಗರ್ತೆ ಕಲಾವಿದರು ವಿಟ್ಲ ಮೈರ ಕೇಪು ನಾಟಕ ತಂಡದ ಮುಹೂರ್ತ ಹಾಗೂ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಇಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ನಡೆಯಿತು.
ಕಳೆದ ಬಾರಿ “ಕಲ್ಜಿಗದ ಕಾಳಿ ಮಂತ್ರದೇವತೆ” ಎಂಬ ಹಿಟ್ ನಾಟಕ ನೀಡಿದ್ದ ತಂಡವು ಈ ಭಾರಿ ನೈಜ ಘಟನೆ ಆಧಾರಿತ ಕುತೂಹಲಭರಿತ ಸಾಮಾಜಿಕ ನಾಟಕಕ್ಕೆ “ಕಾಂಚನ” ಎಂಬ ಶೀರ್ಷಿಕೆಯನ್ನು ಇಟ್ಟಿದ್ದಾರೆ. ಇತ್ತೀಚೆಗೆ ತುಳು ರಂಗಭೂಮಿ ನಾಟಕಗಳಲ್ಲಿ ಅನೇಕ ಹೊಸ ಹೊಸ ಪ್ರಯೋಗಗಳು ನಡೆಯುತ್ತಿದ್ದು ತುಳು ರಂಗ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಕೃಷ್ಣಯ್ಯ ಕೆ ಅರಮನೆ, ಮುಖ್ಯ ಅಥಿತಿಯಾಗಿ ಶ್ರೀಮತಿ ಮತ್ತು ಶ್ರೀ ಮನು ಎಂ ತೊಂಡಚ್ಚನ್ ಇಂಡಸ್ಟ್ರೀಸ್ ಪಂಜ, ಶ್ರೀ ದುರ್ಗಾ ಮಿತ್ರ ವೃoದ (ರಿ) ಮೈರ ಇದರ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ಜಗಜ್ಜಿವನ್ ರಾಮ್ ಶೆಟ್ಟಿ, ಪುರುಷೋತ್ತಮ ಕಲ್ಲಂಗಳ, ನಾಟಕದ ನಿರ್ದೇಶಕರಾದ ನಿತಿನ್ ಹೊಸಂಗಡಿ, ನಾಟಕ ತಂಡದ ಅಧ್ಯಕ್ಷರಾದ ಪದ್ಮನಾಭ ಕಲ್ಲಂಗಳ ಹಾಗೂ ಕಲಾವಿದರು, ತಂತ್ರಜ್ಞರು ಮತ್ತು ಉಪಸ್ಥಿತರಿದ್ದರು..