ಶಾಸಕ ಸುನೀಲ್ ಕುಮಾರ್ ರವರು ಇತೀಚಿಗೆ ನಡೆದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಹಿಂದೆ ಜವಳಿ ಪಾರ್ಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅದನ್ನು ದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ಪ್ರಚಾರನ್ನೂ ಪಡೆದಿದ್ದರು ಆದರೆ ಉದ್ದೇಶಿತ ಜವಳಿ ಪಾರ್ಕಿಗೆ ಸರಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎನ್ನುವ ಸತ್ಯ ವಿಧಾನಸಭಾ ಕಲಾಪದಿಂದ ಬಹಿರಂಗವಾಗಿದೆ ಹಾಗಾಗಿ ಕ್ಷೇತದ ಜನತೆಗೆ ಸುಳ್ಳು ಹೇಳಿದ ಶಾಸಕರು ಕ್ಷಮೆಯಾಚಿಸಬೇಕು ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ.
ಕಾರ್ಕಳದಲ್ಲಿ ಜವಳಿ ಪಾರ್ಕ್ ನಿರ್ಮಾಣವನ್ನು ನಾವು ಸ್ವಾಗತಿಸುತ್ತೇವೆ, ಇದರಿಂದ ಉದ್ಯೋಗ ಸೃಷ್ಟಿ ಮತ್ತು ಊರಿನ ಅಭಿವೃದ್ಧಿಯಾಗುದಾದರೆ ಅದನ್ನೂ ಬೆಂಬಲಿಸುತ್ತೇವೆ, ಆದರೆ ಅನುದಾನವೇ ಬಿಡುಗಡೆಯಾಗದೆ ಸುಳ್ಳು ಹೇಳಿ ಗುದ್ದಲಿ ಪೂಜೆ ನೆರವೇರಿಸಿದ್ದು, ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗದ ಹುಸಿ ಭರವಸೆ ನೀಡಿದ್ದು ಕ್ಷೇತ್ರದ ಜನತೆಗೆ ಮಾಡಿದ ಮೋಸವಲ್ಲವೆ? ಇದರ ಉದ್ದೇಶ ಕೇವಲ ಚುನಾವಣೆಯ ಗಿಮಿಕ್ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಜವಳಿ ಪಾರ್ಕ್ ನಿರ್ಮಾಣಕ್ಕೆ ಬೇಕಾಗುವಷ್ಟು ಜಮೀನು ಗುರುತಿಸಲು ವಿಳಂಬವಾದ ಕಾರಣ ಸಮಸ್ಯೆ ಉಂಟಾಯಿತು ಎಂದು ವಿಧಾನಸಭಾ ಕಲಾಪದಲ್ಲಿ ತಾವೇ ಒಪ್ಪಿಕೊಂಡಿದ್ದೀರಿ, ಸಚಿವರು ಕೂಡ ಈ ಬಗ್ಗೆ ಸ್ಫಷ್ಟ ಉತ್ತರ ನೀಡಿ ಸತ್ಯ ಏನೆಂದು ಬಹಿರಂಗ ಪಡಿಸಿದ್ದಾರೆ ಹಾಗಾಗಿ ಇನ್ನೂ ನೂತನ ಸರಕಾರದ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಿದರೆ ಏನು ಪ್ರಯೋಜನವಿಲ್ಲ ತಾನು ಸಚಿವನಾದರೂ ಅನುದಾನ ಒದಗಿಸದೆ ಕ್ಷೇತ್ರದ ಜನತೆಗೆ ಸುಳ್ಳು ಹೇಳಿದ ತಾವು ಕ್ಷಮೆಯಾಚಿಸಬೇಕು ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ.