ಮಿಲಾಗ್ರಿಸ್ ವಾರ್ಡ್ ನ ಮೇಲಿನಮೊಗರು ಧ್ವಜಸ್ತಂಭದ ಬಳಿ ರಸ್ತೆ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಚಾಲನೆ

Prakhara News
1 Min Read

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 47 ನೇ ಮಿಲಾಗ್ರಿಸ್ ವಾರ್ಡಿನ ಮೇಲಿನಮೊಗರು ಧ್ವಜಸ್ತಂಭದ ಬಳಿ 10ಲಕ್ಷ ರೂ ವಿಶೇಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆಯು ನಡೆಯಿತು.

ನಂತರ ಮಾತನಾಡಿದ ಶಾಸಕರು, ಇಲ್ಲಿನ ಸ್ಥಳೀಯರ ಬೇಡಿಕೆಯಂತೆ ಲಭ್ಯವಿರುವ ಅನುದಾನಗಳನ್ನು ಹೊಂದಿಸಿಕೊಂಡು ಈ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಕಾಮಗಾರಿ ವೇಳೆ ಉಂಟಾಗುವ ಅಡಚಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ರಮೇಶ್ ಹೆಗ್ಡೆ, ಮೋಹನ್ ಪೂಜಾರಿ, ರಾಮಮೂರ್ತಿ ಸೋಮನಹಳ್ಳಿ, ಪ್ರವೀಣ್ ನಿಡ್ಡೇಲ್, ಶಬರೀಶ್, ಮಂಜುನಾಥ್ ಅತ್ತಾವರ, ವಿನೋದ್ ಕುಮಾರ್, ಶರ್ಮಿಳಾ ಶೆಟ್ಟಿ, ಹರೀಶ್ ರಾವ್, ಸುರೇಶ್ ಕುಮಾರ್, ಜ್ಯೋತಿ ಯಲಬುರ್ಗಿ, ಎಂ.ಬಿ ರಾಜ, ಶೈಲ ಚಂದ್ರಹಾಸ್, ರಮಾಕಾಂತ್ ನಾಯಕ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

Share This Article
Leave a Comment