ಪುತ್ತೂರು:ಇನ್‌ಸ್ಟಾಗ್ರಾಂ ಖಾತೆಗೆ ಅಪ್ ಲೋಡ್ ಮಾಡಿದ ದಂಪತಿ ಭಾವಚಿತ್ರಕ್ಕೆ ಮಾನಹಾನಿಕಾರಕ ಕಮೆಂಟ್ ಹಾಕುವ ಮೂಲಕ ನಿಂದನೆ ಮಾಡಿರುವುದಾಗಿ ಆರೋಪಿಸಿ ನೀಡಲಾದ ದೂರಿಗೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೆಯ್ಯರು ಗ್ರಾಮದ ಮಾಡಾವು ಬಾಲ್ತಿಕುಮೇರು ನಿವಾಸಿ ಅನಿವಾಶ್ ಬಿ.ಡಿ. ಮತ್ತು ಮೇಘಾ ಪಿ.ಕೆ.ದಂಪತಿಯ
ಫೋಟೋವೊಂದನ್ನು ಮೇಘಾ ಸಿ.ಕೆ ಅವರು ತನ್ನ ಇನ್‌ಸ್ಟಾಗ್ರಾಂ ಖಾತೆಗೆ ಅಪ್ ಲೋಡ್ ಮಾಡಿದ್ದರು.

ಈ ಫೋಟೋ ಕುರಿತು ‘ದೀಕ್ಷೀಶ್ 405’ ಎಂಬ ಖಾತೆಯಿಂದ ಅವಹೇಳನಕಾರಿ ಮತ್ತು ಅಸಭ್ಯ ಉದ್ದೇಶದಿಂದ ಮಾನಹಾನಿಕಾರ ಕಮೆಂಟ್ ಬಂದಿದ್ದ ಕುರಿತು ಮೇಘ ಸಿ.ಕೆ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.



