Home ಕರಾವಳಿ ಉಡುಪಿ–ಕಾಸರಗೋಡು 400 ಕೆ.ವಿ ಹೈ–ಟೆನ್ಷನ್‌ ವಿದ್ಯುತ್‌ ಮಾರ್ಗಕ್ಕೆ ವಿರೋಧ – ರೈತರ ಹೋರಟಕ್ಕೆ ರಮಾನಾಥ ರೈ...

ಉಡುಪಿ–ಕಾಸರಗೋಡು 400 ಕೆ.ವಿ ಹೈ–ಟೆನ್ಷನ್‌ ವಿದ್ಯುತ್‌ ಮಾರ್ಗಕ್ಕೆ ವಿರೋಧ – ರೈತರ ಹೋರಟಕ್ಕೆ ರಮಾನಾಥ ರೈ ಬೆಂಬಲ

0

ಮಂಗಳೂರು : ಉಡುಪಿಯ ನಂದಿಕೂರಿನಿಂದ ಕಾಸರಗೋಡಿಗೆ 400 ಕೆ.ವಿ ಹೈ ಟೆನ್ಷನ್ ವಿದ್ಯುತ್ ಮಾರ್ಗಕ್ಕೆ ರೈತರ ವಿರೋಧದ ಬೆನ್ನಲ್ಲೇ ಇದೀಗ ಕೃಷಿಕರ ಬೇಡಿಕೆಗೆ ಮಾಜಿ ಸಚಿವ ರಮಾನಾಥ ರೈ ಬೆಂಬಲಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ರೈತರನ್ನು ವಿಶ್ವಾಸಕ್ಕೆ ಪಡೆಯದೆಯೇ ವಿದ್ಯುತ್‌ ಮಾರ್ಗವನ್ನು ಅಳವಡಿಸಲಾಗುತ್ತಿದೆ. ಇದನ್ನು ವಿರೋಧಿಸಿ ರೈತರು ‌400 ಕೆ.ವಿ.‌ ವಿದ್ಯುತ್‌ ಮಾರ್ಗ ವಿರೋಧಿ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟ ನಡೆಸುತ್ತಿದ್ದಾರೆ. ಸರ್ವೆ ನಡೆಸಲು ಅವಕಾಶ ನೀಡುತ್ತಿಲ್ಲ. ಇದು ಸಂಪತ್ತು ಉಳಿಸುವ ಹೋರಾಟ ಮಾತ್ರವಲ್ಲ, ಕೃಷಿಕರ ಜೀವನ್ಮರಣದ ಹೋರಾಟ ಎಂದರು.

ಈ ಯೋಜನೆಯಿಂದ ರೈತರಿಗಷ್ಟೇ ಅಲ್ಲದೆ ಮೀಸಲು ಅರಣ್ಯಕ್ಕೂ ಹಾನಿಯುಂಟಾಗಲಿದೆ. . ವೀರಕಂಭ ಗ್ರಾಮದಲ್ಲಿ ಮೀಸಲು ಅರಣ್ಯದಲ್ಲಿ 600 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಸಿರುವ ಸಿರಿಚಂದನವನಕ್ಕೂ ಹಾನಿಯಾಗಲಿದೆ’ ಎಂದು ತಿಳಿಸಿದರು.
‘ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಲಭ್ಯವಿರುವ 40 ಮೀ. ಜಾಗದಲ್ಲಿ ನೆಲದಡಿ ವಿದ್ಯುತ್ ಕೇಬಲ್‌ ಅಳವಡಿಸಬಹುದು. ಸಮುದ್ರದಲ್ಲಿ ವಿದ್ಯುತ್‌ ಮಾರ್ಗವನ್ನು ಅಳವಡಿಸಬಹುದು ಎಂಬುದು ರೈತರ ಸಲಹೆ. ಇದನ್ನು ಪರಿಗಣಿಸಬೇಕು’ ಎಂದು ಅವರು ಒತ್ತಾಯಿಸಿದರು.

LEAVE A REPLY

Please enter your comment!
Please enter your name here