ಸೌದಿಅರೇಬಿಯಾ: ಭೀಕರ ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದ ಆಂಧ್ರ ಪ್ರದೇಶ ಮೂಲದ ಕುಟುಂಬಕ್ಕೆ ಶುಕ್ರವಾರ ರಿಯಾಧ್ನಲ್ಲಿ ಅಂತಿಮ ಸಂಸ್ಕಾರ ನಡೆಸಲಾಗಿದೆ.
ಅಪಘಾತದಿಂದ ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದರಿಂದ ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಮೃತರ ಗುರುತನ್ನು ಡಿಎನ್‌ಎ ಪರೀಕ್ಷೆ ಮೂಲಕ ದೃಢಪಡಿಸಿಕೊಂಡ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.
ಆಂಧ್ರದ ಚಿತ್ತೂರು ಮೂಲದ ಪ್ರಾಧ್ಯಾಪಕ ದಂಡು ಘೌಸ್ ಬಾಷಾ(35), ಪತ್ನಿ ತಬರಕ್ ಸರ್ವಾರ್ (31), ಮಕ್ಕಳಾದ ಮುಹಮ್ಮದ್ ದಮಿಲ್ ಘೌಸ್ (2) ಮತ್ತು ಮುಹಮ್ಮದ್ ಇಹಾನ್ ಘೌಸ್(4) ಆಗಸ್ಟ್ 26 ರಂದು ಉಮ್ರಾ ಮುಗಿಸಿ ಕುವೈತ್‌ಗೆ ಮರಳುತ್ತಿದ್ದಾಗ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದರು.
ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ. ಡಿಎನ್‌ಎ ಗುರುತಿನ ನಂತರ ಮೃತದೇಹಗಳ ಗುರುತು ಪತ್ತೆ ಹಚ್ಚಿ ಅಂತ್ಯಕ್ರಿಯೆ ನಡೆಸಲಾಗಿದೆ.
ಕುವೈತ್ನ ಅಮೆರಿಕನ್ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದ ದಂಡು ಘೌಸ್ ಬಾಷಾ, ಹೊಸದಾಗಿ ಖರೀದಿಸಿದ ಕಾರಿನಲ್ಲಿ ತಮ್ಮ ಕುಟುಂಬ ಸಮೇತ ಉಮ್ರಾಕ್ಕಾಗಿ ಸೌದಿ ಅರೇಬಿಯಾಕ್ಕೆ ಬಂದರು. ಉಮ್ರಾ ಮುಗಿಸಿ, ಕುಟುಂಬ ಕುವೈತ್‌ಗೆ ಹಿಂದಿರುಗುತ್ತಿದ್ದಾಗ ರಿಯಾದ್‌ನಿಂದ 120 ಕಿಲೋಮೀಟರ್ ದೂರದಲ್ಲಿ ದುರಂತ ಸಂಭವಿಸಿತ್ತು.