Home ಪ್ರಖರ ವಿಶೇಷ ಭಾರತದ ಇತಿಹಾಸದಲ್ಲಿ ಅಧ್ಯಾತ್ಮಲೋಕದ ಯಾರಾದರೂ ಅದೂ ಗಂಡಸು ಮಠಾಧೀಶರು ಈ ರೀತಿ ಬಿಸಿಲಲ್ಲಿ ಪ್ರಾರ್ಥನಾ ಮಂದಿಕ...

ಭಾರತದ ಇತಿಹಾಸದಲ್ಲಿ ಅಧ್ಯಾತ್ಮಲೋಕದ ಯಾರಾದರೂ ಅದೂ ಗಂಡಸು ಮಠಾಧೀಶರು ಈ ರೀತಿ ಬಿಸಿಲಲ್ಲಿ ಪ್ರಾರ್ಥನಾ ಮಂದಿಕ ಕಟ್ಟಲು ದುಡಿದ ಉದಾಹರಣೆ ಇದೆಯೆ ?

1
Is there an example in the history of India where someone from the spiritual world, that too a male abbot, worked to build a prayer hall in the sun like this?

ಭಾರತದ ಇತಿಹಾಸದಲ್ಲಿ ಅಧ್ಯಾತ್ಮಲೋಕದ ಯಾರಾದರೂ ಅದೂ ಗಂಡಸು ಮಠಾಧೀಶರು ಈ ರೀತಿ ಬಿಸಿಲಲ್ಲಿ ಪ್ರಾರ್ಥನಾ ಮಂದಿಕ ಕಟ್ಟಲು ದುಡಿದ ಉದಾಹರಣೆ ಇದೆಯೆ ?

ನಾನು 1988 ರಲ್ಲಿ ನನ್ನ ಪ್ರಥಮ ಅಧುನಿಕ ವಚನದ ಪುಸ್ತಕ ಹೊರತಂದಾಗ ಕೆಲವು ಸಾಂಪ್ರದಾಯವಾದಿಗಳು ಅದಕ್ಕೆ ಅಡಚಣೆ ಮಾಡಿದ್ದರು. ಮಾತಾಜಿಯವರೊಡನೆ ಸಂಪರ್ಕವೇ ಇಲ್ಲದ ನಾನು ಅವರ ಕುಂಬಳಗೋಡು ಆಶ್ರಮಕ್ಕೆ ಈ ಕುರಿತು ಒಂದು ಅಂಚೆಕಾರ್ಡು ಬರೆದು ಹಾಕಿದ್ದೆ. ತಕ್ಷಣ ಅದಕ್ಕೆ ಮಾತಾಜಿಯವರು ಉತ್ತರಿಸಿˌ ನೀವು ಧೈರ್ಯವಾಗಿ ಮುಂದುವರೆಯಿರಿ ಎಂದು ಹುರಿದುಂಬಿಸಿದ್ದರು. ಆನಂತರ ಅವರ ವಚನಾಂಕಿತ ತಿದ್ದಿದ ವಿವಾದ ನನ್ನನ್ನೂ ನಿರಾಶೆಗೊಳಿಸಿತ್ತು.

ಸತ್ಯವನ್ನು ಪ್ರತಿಪಾದಿಸಿದರೆ ಅದನ್ನು ವಿವಾದವನ್ನಾಗಿ ಮಾಡಿ ಅಪಸಾಹ್ಯ ಮಾಡುವ ಒಂದು ಅನಿಷ್ಟ ಪರಂಪರೆಯೆ ನಮ್ಮ ದೇಶವನ್ನು ಹಾಳು ಮಾಡಿದೆ. ಯಾವಾಗ ಲಿಂಗೈಕ್ಯ ಲಿಂಗಾನಂದ ಶ್ರೀ ಗಳು ಮತ್ತು ಅವರ ನೆರಳಿನಂತೆ ಮಾತಾಜಿಯವರು ಬಸವಣ್ಣ ಎಂದರೆ ದನ ಎಂದು ಜಗಲಿ ಮೇಲಿಟ್ಟು ಪೂಜಿಸುತ್ತಿದ್ದಾಗˌ ಬಸವಣ್ಣನೆಂದರೆ ಸಮಾನತೆಯ ಹರಿಕಾರˌ ಸತ್ಯಸಂಧ ಸಂತˌ ಸಾಮಾಜಿಕ ಕ್ರಾಂತಿಯ ನಾಯಕ ಎಂದು ಜನರಿಗೆ ತಿಳಿಸಲು ಆರಂಭಿಸಿದರೋ ಅಂದೇ ಯಥಾಸ್ಥಿತಿವಾದಿ ಪಟ್ಟಭದ್ರರು ಇವರ ಕುರಿತು ಇಲ್ಲದ ಅಪಹಾಸ್ಯಗಳ ವಿಕ್ರತಿ ಮೆರೆಯಲು ಆರಂಭಿಸಿದರು. ಬಸವಾದಿ ಶರಣರನ್ನೇ ಬಿಡದ ಸಮಾಜಘಾತುಕ ಪೀಡೆಗಳು ನಮ್ಮನ್ನು ಬಿಡುತ್ತವೆಯೆ ?

ಮಾತಾಜಿ ಧೈರ್ಯದಿಂದ ಬಸವ ತತ್ವವನ್ನು ಬಹುಗಟ್ಟಿಯಾಗಿ ಜನಮನದಲ್ಲಿ ಬಿತ್ತಿದರು. ಒಂದಿಡೀ ತಲೆಮಾರನ್ನೇ ಬಸವ ತತ್ವದ ಬಂಧನದೊಳಗೆ ಬಂಧಿಸಿ ಹೊಸ ಮನ್ವಂತರದ ಹೋರಾಟಕ್ಕೆ ಅಣಿಗೊಳಿಸಿದರು. ಪುರುಷಪ್ರಧಾನ ಸಮಾಜದ ಎಲ್ಲ ವಿಕ್ರತಿಗಳನ್ನು ಮೆಟ್ಟಿ ಆಕಾಶದೆತ್ತರಕ್ಕೆ ಎದ್ದುನಿಂತರು. ಬಸವ ವಿರೋಧಿ ಕುಬ್ಜರು ಇದನ್ನು ಕಂಡು ಮತ್ಸರ ಪಟ್ಟರೆ ಹೊರತು ಮತ್ತೇನನ್ನು ಮಾಡಲಾಗಲಿಲ್ಲ. ಒಂದು ಬಹುದೊಡ್ಡ ತಲೆಮಾರನ್ನು ಪ್ರಭಾವಿಸಿ ಮುಂದಿನ ದಿನದ ಹೋರಾಟದ ಹಾದಿಯಲ್ಲಿ ನಮ್ಮನ್ನು ಬಿಟ್ಟು ಅವರು ನಡೆದೆಬಿಟ್ಟರು……

~ ಡಾ. ಜೆ ಎಸ್ ಪಾಟೀಲ.

1 COMMENT

  1. ಬಾಲ್ಕಿ ಶರಣು ಮಾಡಿದ ಮಾಡಿದ್ದು ಸರ್ವಕಾಲಿಕವಾಗ ನೆನೆಯುವಂತಹದ್ದು. ಬೀದರ ಭಾಗಕ್ಕೆ ಕನ್ನಡ ಉಳಿಸಲಿ ಕಚ್ಚೆ ಕಟ್ಟಿ ನಿಂತು ಶಾಲೆಯ ಬುನಾದಿ ತೋಡಿ , ನಿರ್ಮಿಸಿದ್ದು ಇತಿಹಾಸ ಹೆಳುತ್ತದೆ.
    ಅವರು ಬಾಲ್ಕಿ ಮಠದ ಪೀಠಾಧಿಪತಿಗಳು ಆದಾಗ ಮಾಡಿದ್ದು..

LEAVE A REPLY

Please enter your comment!
Please enter your name here