ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ರಾತ್ರೋರಾತ್ರಿ ಸುಮಾರು ಹತ್ತು ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿಯಾದ ಘಟನೆ ಮೇ 18 ರಂದು ರಾತ್ರಿ ನಡೆದಿದೆ.


ಕೋರ್ಟ್ ರಸ್ತೆಯ ಧರ್ಮಶ್ರೀ ಬಿಲ್ಡಿಂಗ್ ನ ಸಮೃದ್ಧಿ ಎಂಟರ್ಪ್ರೈಸಸ್ ನಿಂದ ಸುಮಾರು 1.50 ಲಕ್ಷ ನಗದು ಹಾಗೂ ಸಿಸಿ ಕ್ಯಾಮೆರಾ ವನ್ನು ಹಾನಿಗೊಳಿಸಿ ಮೆಮೊರಿ ಕಾರ್ಡ್ ನ್ನು ಪಡೆದು ಪರಾರಿಯಾಗಿದ್ದಾರೆ. ಹಾಗೂ ಅದೇ ಕಟ್ಟಡದ ಮಹಮ್ಮದ್ ಹನೀಫ್ ರವರ ಟಿ.ಎಚ್ ರಿಯಲ್ ಎಸ್ಟೇಟ್ ಕಚೇರಿ, ಕಟ್ಟಡ ಮಾಲಕರ ಕಚೇರಿ ಸೇರಿದಂತೆ ವಕೀಲರುಗಳಾದ ರಾಧಾಕೃಷ್ಣ, ಉಷಾ ಎನ್.ಜಿ, ಯತೀಶ್ ಶೆಟ್ಟಿ ಪಿ ಕಚೇರಿಗಳಿಗೆ ನುಗ್ಗಿದ್ದಾರೆ.

ಮೂರು ಮಾರ್ಗದ ಬಳಿ ಇರುವ ಮಾತೃಶ್ರೀ ಹೋಟೆಲ್ ನಿಂದ ಡಬ್ಬಿಯಿಂದ ರೂ.5000 ಹಾಗೂ ಡ್ರಾವರ್ ನಿಂದ 2000ಸಾವಿರ, ಶಬರಿ ಎಂಟರ್ಪ್ರೈಸಸ್ ಸುಮಾರು 2ಸಾವಿರ, ಜಯರಾಮ ಮಣಿಯಾಣಿ ವಕೀಲರ ಕಚೇರಿ, ಮೆ। ಹಿಮಾಲಯ ಫೈನಾನ್ಸ್ ಮತ್ತು ಇನ್ವೆಸ್ಟೆಂಟ್, ಜಿತೇಶ್ ಕೆ ವಕೀಲರ ಕಚೇರಿಗೆ ನುಗ್ಗಿದ್ದಾರೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.



