ಕಲಬುರಗಿ:ಹಾವಿನ ದ್ವೇಷ 12 ವರ್ಷ ಎಂಬ ಗಾದೆ ಮಾತೇ ಇದೆ.ಅದು 12 ವರ್ಷದವರೆಗೂ ಸೇಡನ್ನು ಇಟ್ಟುಕೊಂಡಿರುತ್ತದೆ.ವಿಚಿತ್ರ ಅಂದರೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಪ್ರಜ್ವಲ್ ಎಂಬ ಹುಡುಗನಿಗೆ ಎರಡು ತಿಂಗಳಲ್ಲಿ ಹಾವೊಂದು ಬರೋಬ್ಬರಿ ಒಂಬತ್ತು ಬಾರಿ ಕಡಿದಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಓರ್ವ ಬಾಲಕನಿಗೆ ಹಾವೊಂದು ಬೆಂಬಿಡದೆ ಕಾಡುತ್ತಿದೆ.ಜುಲೈ 3 ರಂದು ಬಾಲಕನಿಗೆ ಮೊದಲ ಬಾರಿ ಹಾವು ಕಡಿದಿತ್ತು.ನಂತದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಡಿಸ್ಚಾರ್ಜ್ ಆದ ಮೂರು ದಿನದಲ್ಲೇ ಮತ್ತೊಮ್ಮೆ ಹಾವು ಕಡಿದಿದೆ. ಒಟ್ಟು ಒಂಬತ್ತು ಬಾರಿ ಹಾವು ಕಡಿದಿದೆ ಎಂದು ಬಾಲಕ ಹೇಳುತ್ತಾನೆ.ಆರು ಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಮೂರು ಬಾರಿ ನಾಟಿ ಔಷಧೀಯ ಚಿಕಿತ್ಸೆ ಕೊಡಿಸಲಾಗಿದೆ.
ಕಡೆಗೆ ಪೋಷಕರು ಹಾವಿಗೆ ಹೆದರಿ ಹಲಕರ್ಟಿ ಗ್ರಾಮದಿಂದ ವಾಡಿ ಎಂಬ ಊರಿಗೆ ವಲಸೆ ಹೋದರು.ಅಲ್ಲಿ ಮನೆ ಮಾಡಿಕೊಂಡು ಇದ್ದರು.ಅಲ್ಲಿಯು ಕೂಡ ಹಾವು ಆ ಹುಡುಗನಿಗೆ ಕಚ್ಚಿದೆ.ಆ ಹಾವು ಪೋಷಕರಿಗೆ ,ಬೇರೆ ಜನರಿಗೆ ಕಾಣಿಸಿಕೊಂಡಿಲ್ಲ.