Home ತಾಜಾ ಸುದ್ದಿ ‘ಅನರ್ಹ BPL ಕಾರ್ಡ್’ದಾರರ ಪಟ್ಟಿ ಬಿಡುಗಡೆ: ಪ್ರತಿ ಕೆಜಿ ಅಕ್ಕಿಗೂ ‘ದಂಡ ಫಿಕ್ಸ್’

‘ಅನರ್ಹ BPL ಕಾರ್ಡ್’ದಾರರ ಪಟ್ಟಿ ಬಿಡುಗಡೆ: ಪ್ರತಿ ಕೆಜಿ ಅಕ್ಕಿಗೂ ‘ದಂಡ ಫಿಕ್ಸ್’

0

ರಾಜ್ಯ ಸರ್ಕಾರದಿಂದ ನಕಲಿ ರೇಷನ್ ಕಾರ್ಡ್ ದಾರರ ವಿರುದ್ಧ ಸಮರವನ್ನೇ ಸಾರಿದೆ. ಅನರ್ಹ ಪಡಿತರ ಚೀಟಿದಾರರ ಕಾರ್ಡ್ ರದ್ದು ಮಾಡಲಾಗಿದೆ. ಈ ಸಂಬಂಧ ಅನರ್ಹ ಬಿಪಿಎಲ್ ಕಾರ್ಡ್ ದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಈಗಾಗಲೇ ರಾಜ್ಯ ಸರ್ಕಾರವು ಅನರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಾಗಿ ಹೇಳಿತ್ತು. ಅದರಂತೆ ಅಧಿಕಾರಿಗಳಿಗೆ ಅನರ್ಹರಲ್ಲದವರು ಯಾರು ಯಾರು ರೇಷನ್ ಕಾರ್ಡ್ ಪಡೆದಿದ್ದಾರೆ ಎನ್ನುವಂತ ಪಟ್ಟಿಯನ್ನು ತಯಾರಿಸುವಂತೆಯೂ ಸೂಚಿಸಿತ್ತು. ಆಹಾರ ಇಲಾಖೆಯ ಅಧಿಕಾರಿಗಳು ಬಿಪಿಎಲ್ ಕಾರ್ಡ್ ಪಡೆಯುವ ಮಾನದಂಡದಂತೆ ಯಾರು ಅರ್ಹರು, ಯಾರು ಅನರ್ಹರು ಎಂಬುದಾಗಿ ಮಾಹಿತಿ ಕಲೆಹಾಕಿ, ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿರುವಂತ ಪಟ್ಟಿಯನ್ನು ತಯಾರಿಸಿತ್ತು.

ಚಿಕ್ಕಮಗಳೂರು ಜಿಲ್ಲೆಯಲ್ಲಿ 50126 ರೇಷನ್ ಕಾರ್ಡ್ ಗಳನ್ನು ಪರಿಶೀಲನೆ ಮಾಡಲಾಗಿದೆ. ಆಹಾರ ಇಲಾಖೆಯಿಂದ 1.20 ಲಕ್ಷ ಆದಾಯದ ಮಿತಿ ಮೀರಿದವರು. 10 ಚದರ ಅಡಿಗಳಿಗಿಂತ ಹೆಚ್ಚು ಮನೆ ಹೊಂದಿರುವವರು ಸೇರಿದಂತೆ ಇತರೆ ಮಾನದಂಡಗಳನ್ನು ಆಧರಿಸಿ ಅನರ್ಹರಾದಂತ ಬಿಪಿಎಲ್ ಕಾರ್ಡ್ ದಾರರ ಪಟ್ಟಿಯನ್ನು ಜಿಲ್ಲಾಡಳಿತದಿಂದ ಬಿಡುಗಡೆ ಮಾಡಲಾಗಿದೆ.

ಈ ಅನರ್ಹರು ಬಿಪಿಎಲ್ ಕಾರ್ಡ್ ಪಡೆದು ರೇಷನ್ ಪಡೆದಿದ್ದಕ್ಕೆ ಪ್ರತಿ ಕೆಜಿಗೆ ರೂ.33ರಂತೆ ದಂಡವನ್ನು ವಸೂಲಿ ಮಾಡುವುದಕ್ಕೆ ಆಹಾರ ಇಲಾಖೆ ಮುಂದಾಗಿದೆ. ಹೀಗಾಗಿ ದಿನಗೂಲಿ ನೌಕರರು, ಕೂಲಿ ಕಾರ್ಮಿಕರ ಕಾರ್ಡ್ ಕೂಡ ರದ್ದಾಗುವ ಆತಂಕ ಎದುರಾಗಿದೆ. ಜೊತೆಗೆ ರಾಜ್ಯಾಧ್ಯಂತ ಇದೇ ಮಾದರಿಯಲ್ಲಿ ಆಹಾರ ಇಲಾಖೆಯಿಂದ ಅನರ್ಹ ಬಿಪಿಎಲ್ ಕಾರ್ಡ್ ದಾರರ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ನಕಲಿ ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್ ನೀಡೋದು ಗ್ಯಾರಂಟಿಯಾದಂತೆ ಆಗಿದೆ.

LEAVE A REPLY

Please enter your comment!
Please enter your name here