ಲಷ್ಕರ್ ಇ ತೊಯ್ಬ ಸಂಘಟನೆಯ ಸದಸ್ಯ ಅಫ್ಸರ್ ಪಾಷಾ ಕುಕ್ಕರ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದೆ.
ಕರ್ನಾಟಕದ ಜೈಲು ಒಂದರಲ್ಲಿ ಇದ್ದುಕೊಂಡೆ ಶಾರುಖ್ ಗೆ ಸ್ಪೋಟದ ತರಬೇತಿ ನೀಡಿದ್ದು ಪಾಷಾ ಎಂದು ಹೇಳಲಾಗುತ್ತಿದೆ.ಎನ್ಐಎ ತನಿಖೆ ವೇಳೆ ಸ್ಫೋಟಕ ಮಾಹಿತಿ ಪತ್ತೆಯಾಗಿದೆ.ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಅಪ್ಸರ್ ಪಾಷಾ ಬಾಂಗ್ಲಾದೇಶದಲ್ಲಿ ಉಗ್ರ ತರಬೇತಿ ಪಡೆದಿದ್ದ ಎಂದು ಹೇಳಲಾಗುತ್ತಿದೆ.
ಉಗ್ರ ಪಾಷಾ ಈ ಹಿಂದೆ ಬೆಳಗವಿಯ ಹಿಂಡಲಗಾ ಜೈಲಿನಲ್ಲಿದ್ದ.ಉಗ್ರ ಅಫ್ಸರ ಪಾಶ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಪ್ರಕರಣದಲ್ಲೂ ಭಾಗಿಯಾಗಿದ್ದ ಪ್ರಕರಣದ ಸಂಬಂಧ ಈಗ ಮಹಾರಾಷ್ಟ್ರದ ನಾಗಪುರ್ ಜೈಲಿನಲ್ಲಿದ್ದಾನೆ ಎಂದು ತಿಳಿದುಬಂದಿದೆ.2005ರ ಬೆಂಗಳೂರಿನ ದಾಳಿ ಪ್ರಕರಣದ ಆರೋಪಿಯಾಗಿದ್ದಾನೆ.2012ರಲ್ಲಿ ಕಾಶ್ಮೀರದಲ್ಲಿ ಉಗ್ರ ನೇಮಕಾತಿ ಪ್ರಕರಣದ ಅಪರಾಧಿ ಹಾಗೂ ಬೆಳಗಾವಿಯ ಸಹ ಕೈದಿಗಳಿಗೆ ಮೂಲಭೂತವಾದ ಬೋಧನೆ ಮಾಡುತ್ತಿದ್ದ ಎನ್ನಲಾಗಿದೆ.
ಬೆಂಗಳೂರು ಬಾಂಬ್ ಸ್ಪೋಟ ಪ್ರಕರಣ ಒಂದರಲ್ಲಿ ಪಾಷಾ ಕೈವಾಡ ಕರ್ನಾಟಕದ ಜೈಲು ಒಂದರಲ್ಲಿ ಶಾರುಖ್ ಗೆ ಸ್ಪೋಟದ ತರಬೇತಿ ನೀಡಿದ್ದ ಎಂದು ಹೇಳಲಾಗುತ್ತಿದೆ.ಉಗ್ರ ಪಾಷಾ ಬ್ಯಾಂಕ್ ಖಾತೆಗೆ ನಿಷೇಧಿತ ಪಿ.ಎಫ್.ಐ ಹಣ ಹಾಕಿದೆ.ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ವಿಚಾರವಾಗಿ ಪಾಷಾ ವಿಚಾರಣೆ ನಡೆಸಲಾಗುತ್ತಿದ್ದು ಉಗ್ರ ಪಾಷಾನಿಂದ ನಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.