ಮಂಗಳೂರು: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸರ ಅಟ್ಟಹಾಸ ಮುಂದುವರಿದಿದೆ. ಮಂಗಳೂರಿನ ಖಾಸಗಿ ವೆಬ್‌ಸೈಟ್ ವರದಿಗಾರನ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ. ಕಾವೂರು ಬಳಿಯ ರೆಸ್ಟೋರೆಂಟ್ ಗೆ ಸ್ನೇಹಿತೆಯ ಜೊತೆ ಊಟಕ್ಕೆ ತೆರಳಿದ್ದ ವರದಿಗಾರ ಅಭಿಜಿತ್ ಊಟ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ನೀನು ಬ್ಯಾರಿಯಾ? ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಹಿಂದೂ ಹುಡುಗಿ ಜೊತೆ ಏನು ಕೆಲಸ ಅಂತ ಪ್ರಶ್ನಿಸಿದ್ದಾರೆ. ಹಿಂದೂ ಯುವಕನನ್ನು ಮುಸ್ಲಿಂ ಎಂದು ತಿಳಿದು ಹಲ್ಲೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಗೆ ಅಭಿಜಿತ್ ದೂರು ನೀಡಿದ್ದು, ನಿಂದನೆ ಮಾಡಿ ಹಲ್ಲೆ ನಡೆಸಿದ ಕೋಟೇಕಾರು ನಿವಾಸಿ ಚೇತನ್ (37) ಹಾಗೂ ಯೆಯ್ಯಾಡಿ ನಿವಾಸಿ ನವೀನ್(43) ಅವರನ್ನು ಬಂಧಿಸಲಾಗಿದೆ. ಜುಲೈ 28ರ ರಾತ್ರಿ ಘಟನೆ ನಡೆದಿದ್ದು, ಇಂದು ಆರೋಪಿಗಳ ಬಂಧನವಾಗಿದೆ.