Home ಕ್ರೈಂ ನ್ಯೂಸ್ ಬೆಂಗಳೂರು ಜೋಡಿ ಕೊಲೆ: ಸುಪಾರಿ ನೀಡಿದ್ದ ಆರೋಪದಡಿ ಜಿ-ನೆಟ್ ಕಂಪನಿ ಮಾಲೀಕನ ಬಂಧನ

ಬೆಂಗಳೂರು ಜೋಡಿ ಕೊಲೆ: ಸುಪಾರಿ ನೀಡಿದ್ದ ಆರೋಪದಡಿ ಜಿ-ನೆಟ್ ಕಂಪನಿ ಮಾಲೀಕನ ಬಂಧನ

0

ಬೆಂಗಳೂರು: ಏರೋನಿಕ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಹಾಗೂ ಸಿಇಒ ವಿನುಕುಮಾರ್ ಕೊಲೆ ಪ್ರಕರಣದಲ್ಲಿ ಜಿ-ನೆಟ್ ಕಂಪನಿ ಮಾಲೀಕ ಅರುಣ್‌ಕುಮಾರ್‌ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜುಲೈ 11ರಂದು ನಡೆದಿದ್ದ ಕೊಲೆ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಿದ್ದ ಪೊಲೀಸರು, ಅರುಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ‘ವ್ಯವಹಾರದ ವೈಷಮ್ಯದಿಂದಾಗಿ ಕೊಲೆ ಮಾಡಲು ಅರುಣ್ ಸುಪಾರಿ ನೀಡಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಅಪರಾಧ ಸಂಚು ಹಾಗೂ‌ ಕೊಲೆ ಆರೋಪದಡಿ ಅರುಣ್‌ನನ್ನು ಬಂಧಿಸಲಾಗಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಬಿ.ಎಂ. ಲಕ್ಷ್ಮಿಪ್ರಸಾದ್ ತಿಳಿಸಿದ್ದಾರೆ. ‘ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಎಲ್ಲರನ್ನೂ ಕಸ್ಟಡಿಗೆ ಪಡೆಯಲಾಗಿದೆ’ ಎಂದರು. 


LEAVE A REPLY

Please enter your comment!
Please enter your name here